ದೊ॑ಡ್ಡಬಳ್ಳಾಪುರ (Doddaballapura); ದೇಶವನ್ನು ಕ್ಷಯ ಮುಕ್ತ ದೇಶವನ್ನಾಗಿಸಲು ಗ್ರಾಮ ಪಂಚಾಯಿತಿಗಳಿಂದ ಹಿಡಿದು ನಗರ ಪ್ರದೇಶ ಸೇರಿದಂತೆ ಎಲ್ಲರಲ್ಲೂ ಜಾಗೃತಿ ಮೂಡಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಲೆಕ್ಕ ಕೃಷ್ಣಾರೆಡ್ಡಿ ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಘಟಕದ ವತಿಯಿಂದ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷಯರೋಗದಿಂದ ಗುಣವಾಗಿರುವ ಟಿ.ಬಿ ಚಾಂಪಿಯನ್ಗಳಿಗೆ ತರಬೇತಿ ನೀಡಲಾಗುತ್ತಿದ್ದು, ಇವರು ಹೊಸ ಕ್ಷಯ ರೋಗಿಗಳಿಗೆ ಮನೋಸ್ಥರ‍್ಯ ನೀಡಿ ಚಿಕಿತ್ಸೆ ಪರ‍್ಣವಾಗಿ ಪಡೆಯಲು ಮನವೊಲಿಸಲಿದ್ದಾರೆ.
ಕ್ಷಯ ರೋಗವು ಗಾಳಿಯಲ್ಲಿ ಬಹುಬೇಗ ಹರಡುವ ಕಾಯಿಲೆಯಾಗಿದ್ದು, ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಸತತ ಕೆಮ್ಮು, ಜ್ವರ ಸಂಜೆ ವೇಳೆ ಹೆಚ್ಚಳ, ತೂಕ ಕಡಿಮೆಯಾಗುವುದು ಪ್ರಮುಖ ಲಕ್ಷಣವಾಗಿದ್ದು, ವೈದ್ಯರು ಹೇಳುವವರೆಗೆ ನಿರಂತರ ಚಿಕಿತ್ಸೆಯಿಂದ ಮಾತ್ರ ಕ್ಷಯ ರೋಗ ಸಂಪರ‍್ಣ ಗುಣಮುಖವಾಗಲು ಸಾಧ್ಯ.
ಟಿಬಿಯು ಶ್ವಾಸಕೋಶಗಳಿಗಷ್ಟೇ ಅಲ್ಲದೇ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು. ರೋಗ ನಿರ್ಣಯಿಸಿದ ಎಲ್ಲಾ ಪ್ರಕರಣಗಳಿಗೆ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಕಫವನ್ನು ಪರೀಕ್ಷಿಸಿಕೊಳ್ಳಬೇಕಿದೆ.
ದೇಶವನ್ನು ಕ್ಷಯ ಮುಕ್ತವನ್ನಾಗಿಸಲು ಸಮುದಾಯದ ಸಹಕಾರದೊಂದಿಗೆ ಟಿ.ಬಿ ಚಾಂಪಿಯನ್ಗಳ ಸಹಕಾರ ಸಹ ಅಗತ್ಯವಾಗಿದೆ.
ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಲ್ಲಿ, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ, ಸಮುದಾಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಾಜರಾಗಿ ಜಾಗೃತಿ ಮೂಡಿಸುವುದು ಟಿ.ಬಿ ಬಗ್ಗೆ ಅರಿವು ಮೂಡಿಸುವುದು ಟಿಬಿ ಬಗ್ಗೆ ಇರುವಂತಹ ಕಳಂಕ ತಾರತಮ್ಯವನ್ನು ಹೋಗಲಾಡಿಸಿ ಕ್ಷಯ ಮುಕ್ತ ಭಾರತವನ್ನು ಮಾಡಲು ಕೈಜೋಡಿಸುವುದು. ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಮಾಡುವಂತೆ ಮನವರಿಕೆ ಮಾಡುವುದು. ಆಯ್ದ ಚಾಂಪಿಯನ್ ಆಯ್ಕೆ ಮಾಡಿ ತರಬೇತಿಯನ್ನು ನೀಡುವುದು ತರಬೇತಿ ಪಡೆದ ಟಿಬಿ ಚಾಂಪಿಯನ್ ಮುಂದಿನ ದಿನಗಳಲ್ಲಿ ಬರುವ ಹೊಸ ಟಿಬಿ ರೋಗಿಗಳಿಗೆ ಮನೋಸ್ಥರ‍್ಯ ನೀಡಿ ಚಿಕಿತ್ಸೆ ಪರ‍್ಣವಾಗಿ ಪಡೆಯಲು ಮನವೊಲಿಸುವುದು ಕರ‍್ಯಕ್ರಮದ ಧ್ಯೇಯವಾಗಿದೆ ಎಂದರು.
ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ.ನಾಗೇಶ್ ಮಾತನಾಡಿ, ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಚಿಕಿತ್ಸೆಯನ್ನು ಪಡೆದು ಟಿಬಿ ಯಿಂದ ಗುಣಮುಖರಾಗಿರುವ ವ್ಯಕ್ತಿಗಳು ಟಿಬಿ ಚಾಂಪಿಯನ್ಗಳಾಗಿ ತರಬೇತಿ ನೀಡುತ್ತಿದ್ದಾರೆ. ಒಂದು ವೇಳೆ ಚಿಕಿತ್ಸೆ ಪ್ರಾರಂಭಿಸಿದ ನಂತರ ರೋಗಿಯು ರ‍್ಧದಲ್ಲಿ ಚಿಕಿತ್ಸೆ ಬಿಟ್ಟರೆ ಆತನಿಗೆ ತನ್ನ ಚಿಕಿತ್ಸೆ ಯ ಅನುಭವಗಳು ಮತ್ತು ಉದಾಹರಣೆಗಳನ್ನು ನೀಡುವುದರ ಮೂಲಕ ಚಿಕಿತ್ಸೆಯನ್ನು ಮುಂದುವರಿಸಲು ಆಪ್ತ ಸಮಾಲೋಚನೆ ಮಾಡಲಾಗುವುದು ಎಂದರು.
ಟಿ.ಬಿ ಗೆದ್ದ ವ್ಯಕ್ತಿಗಳಿಂದ ಟಿಬಿ ಚಾಂಪಿಯನ್ಗಳಾಗಿ ಪರಿವರ್ತಿಸಿದವರ ಸಮ್ಮುಖದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಿಸಿದ್ದು ವಿಶೇಷವಾಗಿತ್ತು.
ಕಾರ‍್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಶಾರದಾ ನಾಗನಾಥ್, ಸೇರಿದಂತೆ ಜಿಲ್ಲಾ ಕ್ಷಯ ರೋಗ ನಿರಂತರ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.