ದೊಡ್ಡಬಳ್ಳಾಪುರ (Doddaballapura): ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಹಿರಿಯ ಮುಖಂಡ ರಾಜಘಟ್ಟ ವೆಂಕಟರಮಣಪ್ಪ ಅವರ ತಾಯಿ ಸುಬ್ಬಮ್ಮ ಅವರು ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಹಿನ್ನೆಲೆಯಲ್ಲಿ ರಾಜಘಟ್ಟದ ಸ್ವಗೃಹದಲ್ಲಿ ಸುಬ್ಬಮ್ಮ ಅವರು ನಿಧನರಾಗಿದ್ದಾರೆ.
ಮೃತರು ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳ ತುಂಬು ಕುಟುಂಬವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ರಾಜಘಟ್ಟದ ರುದ್ರ ಭೂಮಿಯಲ್ಲಿ ನಾಳೆ (ಮಾ.25ರ ಮಂಗಳವಾರ) 11 ಗಂಟೆ ಒಳಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.