Daily story: Known for his grumpiness

ಹರಿತಲೇಖನಿ ದಿನಕ್ಕೊಂದು ಕಥೆ: ಮುಂಗೋಪಕ್ಕೆ ಹೆಸರುವಾಸಿ

Daily story: ದೂರ್ವಾಸ ಅತ್ರಿ ಮುನಿ ಮತ್ತು ಅನಸೂಯ ದಂಪತಿಗಳ ಮಗ. ಇವರು ತನ್ನ ಮುಂಗೋಪಕ್ಕೆ ಹೆಸರುವಾಸಿ. ಇದರಿಂದಾಗಿ ಮಾನವರಿಂದ ಹಾಗೂ ದೇವತೆಗಳಿಂದ ಅತ್ಯಂತ ಹೆಚ್ಚು ಗೌರವ ಪಡೆಯುತ್ತಿದ್ದರು.

ಮಹಾಭಾರತದಲ್ಲಿ, ರಾಜಕುಮಾರಿ ಕುಂತಿಯು ಮಾಡಿದ ಶುಶ್ರೂಷೆಯಿಂದ ಸಂತೃಪ್ತಿಗೊಂಡು ಆಕೆಗೆ ಯಾವ ದೇವತೆಯನ್ನಾದರೂ ವಶಪಡಿಸಿಕೊಳ್ಳಬಹುದಾದ ಮಹಿಮೆಯುಳ್ಳ ಮಂತ್ರಗಳನ್ನು ಉಪದೇಶಿಸಿದ.

ಆ ಮಂತ್ರಗಳ ಮಹಿಮೆಯಿಂದಲೇ ಕುಂತಿ ಕರ್ಣ ಯುಧಿಷ್ಠಿರ ಭೀಮಾರ್ಜುನರನ್ನೂ ಮಾದ್ರಿ ನಕುಲ ಸಹದೇವರನ್ನೂ ಪಡೆದುದು.

ಅಂತಹ ಮಂತ್ರದ ‘ಅದ್ಭುತ’ ಶಕ್ತಿಯನ್ನು , ಕುಂತಿಯು ಪರೀಕ್ಷಿಸುವ ಉದ್ದೇಶದಿಂದ, ಸೂರ್ಯನ ಮೇಲೆ ಪ್ರಯೋಗಿಸಿದಾಗ, ಸೂರ್ಯ ಪ್ರತ್ಯಕ್ಷನಾಗಿದ್ದನ್ನು ಕಂಡು ಹೆದರಿದವಳಾದಳು ಮತ್ತು ಹಿಂತಿರುಗಿ ಹೋಗಲು ಬೇಡಿಕೊಂಡಳು. ಆದರೆ, ಸೂರ್ಯನು ಹೋಗುವ ಮುನ್ನ ಮಂತ್ರದ ಫಲವನ್ನು ನೀಡಿಯೇ /ಪೂರೈಸಿಯೇ ಹೋಗಬೇಕಾಗುತ್ತದೆ.

ಸೂರ್ಯನು ತನ್ನ ಮಾಯಾ ಶಕ್ತಿಯಿಂದ ‘ಕುಂತಿ’ ಗೆ ಮಗುವೊಂದನ್ನು ದಯಪಾಲಿಸಿ, ಆಕೆಯ ಶೀಲವನ್ನೂ ಸಹ ಉಳಿಸಿ ಹೋಗುತ್ತಾನೆ. ಇದರಿಂದಾಗಿ ಮದುವೆಯಾಗದ ರಾಜಕುಮಾರಿಗೆ ‘ಮಗು’ ಹೇಗಾದೀತು? ಎಂಬ ಮುಜುಗರದಿಂದ ಪಾರು ಮಾಡುತ್ತಾನೆ ಅಥವಾ ಸಮಾಜದ ಪ್ರಶ್ನೆಗಳಿಗೆ ಆಸ್ಪದ ಇಲ್ಲದಂತೆ ಮಾಡುತ್ತಾನೆ.

ಕುಂತಿಯು ಮಗುವನ್ನು ತನ್ನ ಬಳಿ ಇಟ್ಟುಕೊಳ್ಳಲು ಹಿಂಜರಿಯುತ್ತಾಳೆ. ಕುರುಕ್ಷೇತ್ರ ದ ಮಹಾಯುದ್ಧದಲ್ಲಿ , ಕರ್ಣ ನು ಒಂದು ‘ಕೇಂದ್ರೀಯ’ ಮಹಾಪಾತ್ರವನ್ನು ಹೊಂದಿ ಬೆಳೆಯುತ್ತಾನೆ. ವೃತ್ತಿಯಲ್ಲಿ ಚಮ್ಮಾರರಾಗಿದ್ದರು.

ದುರ್ಯೋಧನ ದುರ್ವಾಸನಿಗೆ ಹಲವು ಆತಿಥ್ಯ ಮಾಡಿ ಅನುಗ್ರಹಕ್ಕೆ ಪಾತ್ರನಾಗಿ, ವನವಾಸದಲ್ಲಿದ್ದ ಪಾಂಡವರಲ್ಲಿಗೆ ಅವೇಳೆಯಲ್ಲಿ ಹೋಗಿ ಅನ್ನವನ್ನು ಬೇಡಿ , ಅವರಿಗೆ ಶಾಪ ಕೊಡಬೇಕೆಂದು ಹೇಳಿ ಕಳುಹಿಸಿದ. ಆದರೆ ಶ್ರೀಕೃಷ್ಣನ ಕೃಪೆಯಿದ್ದ ಪಾಂಡವರಲ್ಲಿ ಊಟ ಮಾಡದೇ ಹೊಟ್ಟೆ ತುಂಬಿತಾಗಿ ದುರ್ವಾಸ ತನ್ನ ಶಿಷ್ಯರೊಂದಿಗೆ ಅಲ್ಲಿಂದ ಹೊರಟುಹೋದ.

ಒಮ್ಮೆ ಅಂಬರೀಷನಲ್ಲಿಗೆ ಹೋಗಿ, ಅವನನ್ನು ಕೊಲ್ಲಲು ದುರ್ದೇವತೆಯನ್ನು ಸೃಷ್ಟಿಸಿದ. ಅಂಬರೀಷ ವಿಷ್ಣುಚಕ್ರವನ್ನು ಪ್ರಾರ್ಥಿಸಲು ಅದರ ಭಯದಿಂದ ಅಂಬರೀಷನನ್ನೇ ಮರೆಹೊಕ್ಕು ಬದುಕಿಕೊಂಡ.

ಶ್ವೇತಕಿಯೆಂಬ ಅರಸನಿಂದ ಅನೇಕ ಯಜ್ಞಗಳನ್ನು ಮಾಡಿಸಿದ, ಕುರುಕ್ಷೇತ್ರದಲ್ಲಿ ವಾಸಮಾಡುವ ಮುದ್ಗಲ ಅಥವಾ ವ್ರೀಹಿದ್ರೋಣನೆಂಬ ವಹರ್ಷಿಯನ್ನು ಪರೀಕ್ಷಿಸಿ ಅನುಗ್ರಹಿಸಿದ.

ಒಮ್ಮೆ ಈತ ದೇವಲೋಕಸಂಚಾರ ಮಾಡಿ ಬರುತ್ತಿರಲು ವಿದ್ಯಾಧರೆಯೊಬ್ಬಳ ಕೈಯಲ್ಲಿದ್ದ ಹೂಮಾಲೆಯನ್ನು ಕಂಡು, ಮೋಹಭರಿತನಾಗಿ ಅವಳಲ್ಲಿ ಬೇಡಿ ಅದನ್ನು ಪಡೆದು, ತಲೆಗೆ ಸುತ್ತಿಕೊಂಡು ಬರುತ್ತಿದ್ದ.

ಆಗ ಇಂದ್ರ ಶಚಿಯೊಂದಿಗೆ ಐರಾವತದ ಮೇಲೆ ಬರುತ್ತಿರುವುದನ್ನು ಕಂಡು ಆ ಮಾಲೆಯನ್ನು ಇಂದ್ರನ ಮೇಲೆಸೆದ. ಇಂದ್ರ ಅದನ್ನು ಐರಾವತದ ಕುಂಭ ಸ್ಥಳದ ಮೇಲೆ ಹಾಕಿದ. ಐರಾವತ ಅದರ ಪರಿಮಳದಿಂದ ಮದಿಸಿ ಹೂಮಾಲೆಯನ್ನು ನೆಲಕ್ಕೆಸೆಯಿತು. ಇದರಿಂದ ಕ್ರೋಧಗೊಂಡ ದುರ್ವಾಸ ಆತನ ಮೂರು ಲೋಕದ ಸಂಪತ್ತೂ ನಾಶವಾಗಲಿ ಎಂದು ಶಾಪವಿತ್ತ.

ಒಮ್ಮೆ ಭೂಪ್ರದಕ್ಷಿಣೆಗೆ ಹೊರಟ ಈ ಮುನಿ ಕಾಶೀ ಕ್ಷೇತ್ರಕ್ಕೆ ಬಂದ, ಒಡನೆಯೇ ಈತನ ಮನಸ್ಸು ಶಾಂತಿ ಸಮಾಧಾನಗಳಿಂದ ತುಂಬಿತು. ಕಾಶೀ ಕ್ಷೇತ್ರವನ್ನು ಹೊಗಳಿ ತಪಸ್ಸು ಮಾಡಲಾರಂಭಿಸಿದ. ಆದರೆ ಭಗವಂತ ಪ್ರಸನ್ನನಾಗಲಿಲ್ಲ.

ಕ್ರೋಧಗೊಂಡ ಮುನಿ ಕ್ಷೇತ್ರವನ್ನೇ ಶಪಿಸಲು ಮನಸ್ಸು ಮಾಡಿದ. ಇದನ್ನರಿತ ಈಶ್ವರ ಮೈದೋರಿ ಮುನಿಯನ್ನು ಸಮಾಧಾನ ಪಡಿಸಿ, ಮುಕ್ತಿ ದೊರೆಯುವ ಈ ಕ್ಷೇತ್ರದಲ್ಲಿ ನೀನು ಬೇಡುವ ವರವಾದರೂ ಯಾವುದು ಎಂದು ಕೇಳಿದ. ಆಗ ಮುನಿ ತನ್ನ ತಿಳಿಗೇಡಿತನಕ್ಕೆ ತಾನೇ ನಾಚಿ ಭಗವಂತನನ್ನು ಪ್ರಾರ್ಥಿಸಿ ಜ್ಞಾನಸಿದ್ಧಿಯನ್ನು ಪಡೆದರು.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ. ಪಾಟೀಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ.ಬಿ.

ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡುವ ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಎಂ.ಬಿ. ಪಾಟೀಲ (M.B. Patila)

[ccc_my_favorite_select_button post_id="110949"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ದೊಡ್ಡಬಳ್ಳಾಪುರ: ಲಾರಿ ಡಿಕ್ಕಿ ಪ್ರಕರಣ.. ಮೃತ ವೃದ್ಧನ ಗುರುತು ಪತ್ತೆ..!

ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧನೋರ್ವ ಸಾವನಪ್ಪಿರುವ ಘಟನೆ (Accident) ಡಿಕ್ರಾಸ್ ಬಳಿ ಸಂಭವಿಸಿದೆ.

[ccc_my_favorite_select_button post_id="110927"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!