ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಸರ್ಕಾರಿ ಶಾಲೆಗಳನ್ನು ಖಾಸಗಿ ಕಾರ್ಖಾನೆಗಳು ತಮ್ಮ ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ಧಿ ಪಂಥದತ್ತ ಕೊಂಡೊಯ್ಯಲು ಶಿಕ್ಷಣ ಇಲಾಖೆಯ ಕೈಜೋಡಿಸಿವೆ.
ಅಂತೆಯೇ ಬೆಂಗಳೂರಿನ ಇಟಾಚಿ ಟರ್ಮಿನಲ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ ತಾಲೂಕಿನ ಅರಳು ಮಲ್ಲಿಗೆ ಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಎರಡು ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದೆ.

ಇಂದು ನೂತನ ಕಟ್ಟಡಗಳನ್ನು ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಅನೀಸಾ, ಇಟಾಚಿ ಟರ್ಮಿನಲ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಸಿ.ಶಿವರಾಮನೆ, ನಿರ್ದೇಶಕರಾದ ನಕ್ತಾನಿ ಸಾನ್, ಮೋರಿಟಾ ಸಾನ್, ಶರತ್ ಸಾನ್ ಮುಖ್ಯ ಶಿಕ್ಷಕ ಕೇಶವ ಮೂರ್ತಿ, ಮುಖಂಡರಾದ ನಂಜೇಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಿಕ್ಷಕ ಸಂಘದ ಕಾರ್ಯದರ್ಶಿ ಜೈ ಕುಮಾರ್ ಮತ್ತಿತರರಿದ್ದರು.