ಬೆಂಗಳೂರು: ಶೀಲ ಶಂಕಿಸಿ ಪತ್ನಿಯ ಕತ್ತು ಹಿಸುಕಿ ಕೊಲೆ (Murder) ಮಾಡಿ ಪತಿ ಸಂಪಿಗೆಹಳ್ಳಿ ಪೊಲೀಸರಿಗೆ ಶರಣಾಗಿದ್ದಾನೆ.
ಹೆಗ್ಗಡೆ ನಗರದ 1ನೇ ಕ್ರಾಸ್‌ನಲ್ಲಿ ಪತ್ನಿ ವೇಲಾರಮಣಿ (35)ಯನ್ನು ಕೊಲೆಗೈದ ಪತಿ ಚಂದ್ರಶೇಖರ್ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಮಂಗಳವಾರ ಬೆಳಗ್ಗೆ 11 ಗಂಟೆಯ ವೇಳೆ ಆರೋಪಿಯು ಪತ್ನಿ ಕೊಲೆ ಮಾಡಿ ಶರಣಾಗಿದ್ದು, ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಕಳೆದ11 ವರ್ಷಗಳ ಹಿಂದೆ ವೇಲಾರಮಣಿ ಹಾಗೂ ಕ್ಯಾಬ್ ಚಾಲಕನಾಗಿದ್ದ ಚಂದ್ರಶೇಖರ್‌ಗೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು, ಪತ್ನಿ ವೇಲಾರಮಣಿ ಖಾಸಗಿ ಕಂಪನಿಯಲ್ಲಿ ಆಕೌಂಟೆಂಟ್ ಆಗಿದ್ದಳು.
ಪತ್ನಿ ಫೋನ್‌ನಲ್ಲಿ ಯಾವಾಗಲೂ ಮಾತನಾಡುತ್ತಿರುವುದನ್ನು ನೋಡಿ ಚಂದ್ರಶೇಖರ್ ಹಲವು ದಿನಗಳಿಂದ ಆಕೆಯ ಬಗ್ಗೆ ಅನುಮಾನಿಸಿದ್ದ. ನಿನ್ನೆ ಇಬ್ಬರು ಮಕ್ಕಳು ಶಾಲೆಗೆ ಹೋದ ಮೇಲೆ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಚಂದ್ರಶೇಖರ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಬಳಿಕ ಆರೋಪಿ ಗಂಡ ಸಂಪಿಗೆಹಳ್ಳಿ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ನಂತರ ಸ್ಥಳಕ್ಕೆ ತೆರಳಿದ ಸಂಪಿಗೇಹಳ್ಳಿ ಪೊಲೀಸರು, ಕೊಲೆ ಮಾಡಿದ ಸಳ ಪರಿಶೀಲನೆ ನಡೆಸಿ, ಆರೋಪಿ ಚಂದ್ರಶೇಖರ್ ನನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ.