ನಂದ್ಯಾಲ: “ತಾಯಿಯ ಮಮತೆ” ಕರಡಿಯೊಂದು ತನ್ನ ಮರಿಯನ್ನು ಕಾಪಾಡಲು ಪ್ರಾಣವನ್ನೇ ಪಣವಾಗಿಟ್ಟು ದೊಡ್ಡ ಹುಲಿಯೊಂದಿಗೆ ಕಾದಾಡಿರುವ ಘಟನೆ ಆಂಧ್ರಪ್ರದೇಶದ ನಲ್ಲಮಲ ಅರಣ್ಯದಲ್ಲಿ (Nallamala Forest) ನಡೆದಿದೆ.
ಭಾರತದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿರು ನಲ್ಲಮಲ ಅರಣ್ಯದಲ್ಲಿ ಕರಡಿ ಮರಿಯ ಮೇಲೆ ದಾಳಿ ಮಾಡಲು ದೊಡ್ಡ ಹುಲಿಯೊಂದು ಮುಂದಾದ ವೇಳೆ ತಾಯಿ ಕರಡಿ ಹುಲಿಯೊಂದಿಗೆ ಸೆಣೆಸಾಟ ನಡೆಸಿದೆ.
ಕರಡಿಯ ದಾಳಿಗೆ ಬೆದರಿದ ಹುಲಿ, ಕರಡಿಯ ಮರಿಯನ್ನು ಬಿಟ್ಟು ಕಾಡಿಗೆ ಕಾಲ್ತಿದೆ.
ಕರಡಿ ಮತ್ತು ಹುಲಿಯ ಕಾದಾಟದ ವಿಡಿಯೋವನ್ನು ಪ್ರವಾಸಿಗರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಲ್ಲಮಲ ಕಾಡು ಭಾರತದ ಅತ್ಯಂತ ಹಳೆಯ ಕಾಡುಗಳಲ್ಲಿ ಒಂದಾಗಿರುವುದರಿಂದ ಇದು ಪ್ರಾಚೀನ ಸಾಮ್ರಾಜ್ಯಗಳ ಅವನತಿ ಮತ್ತು ಉದಯವನ್ನು ಕಂಡಿದೆ. ಅಲ್ಲದೆ ಯೋಧರ ಯುದ್ಧ ಮತ್ತು ಆಧ್ಯಾತ್ಮಿಕ ಸಂತರ ಪ್ರಯಾಣದ ಯುಗವನ್ನು ಕಂಡಿದೆ.
ಆಂಧ್ರಪ್ರದೇಶದ ಸ್ಥಳೀಯ ತೆಲುಗಿನಲ್ಲಿ ಭಾಷೆಯಲ್ಲಿ ನಲ್ಲಮಲ ಎಂದರೆ ದಟ್ಟವಾದ ಮತ್ತು ಗಾಢವಾದ ಪ್ರಕೃತಿಯನ್ನು ವಿವರಿಸುವ ಕಪ್ಪು ಬೆಟ್ಟಗಳು ಎಂದರ್ಥ.