ದೊಡ್ಡಬಳ್ಳಾಪುರ (Doddaballapura): ವೀರಶೈವ, ಲಿಂಗಾಯಿತ ಎರಡೂ ಒಂದೇ ಎನ್ನುವುದು ಸರ್ವವಿಧಿತ. ಆದರೆ, ರಾಜಕೀಯ ಹಾಗೂ ಮತ್ತಿತರರ ಕಾರಣಗಳಿಂದಾಗಿ ಸಮುದಾಯ ಒಳ ಪಂಗಡಗಳಾಗಿ ಕವಲು ದಾರಿಯಲ್ಲಿ ಸಾಗಿ ಶಕ್ತಿ ಕುಂದಿಸುವ ಕೆಲಸವಾಗುತ್ತಿದೆ. ಈ ದಿಸೆಯಲ್ಲಿ ವೀರಶೈವ, ಲಿಂಗಾಯಿತ ಎಲ್ಲ ಪಂಗಡಗಳು ಒಂದಾಗಿ ಕುಂದಿಸುವ ಕೆಲಸವಾಗುತ್ತಿದೆ. ಈ ದಿಸೆಯಲ್ಲಿ ಸಮುದಾಯದ ಘನತೆ ಹೆಚ್ಚಿಸಬೇಕಿದೆ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗತತ್ವಾದ ಹೇಳಿದರು.
ನಗರದ ಬಸವ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ವೀರಶೈವ ಲಿಂಗಾಯಿತ ಸಮಾಜ ಹಾಗೂ ಅಖಿಲಭಾರತ ವೀರಶೈವ ಲಿಂಗಾಯಿತ ಮಹಾಸಭಾದ ನೇತೃತ್ವದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆ ಹಾಗೂ ಭಾವೈಕ್ಯ ಧರ್ಮ ಸಮಾರಂಭದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವೀರಶೈವ, ಲಿಂಗಾಯಿತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರಥಮ ಸ್ಥಾನದಲ್ಲಿದೆ. ಸಮುದಾಯದ ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ಯುವ ಸಮುದಾಯ ಮುನ್ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಆದರೆ, ಒಳ ಪಂಗಡಗಳ ಹೆಸರಿನಲ್ಲಿ ವೀರಶೈವ, ಲಿಂಗಾಯಿತ ಬೇರೆ ಮಾಡುವ ಹುನ್ನಾರಗಳು ನಡೆಯುತ್ತಿವೆ.
ಸಮುದಾಯದ ಹಿರಿಯರಾದ ಶ್ಯಾಮನೂರು ಶಿವಶಂಕರಪ್ಪ ಶಂಕರ ಬಿದರಿ ಸಹ ವೀರಶೈವ, ಲಿಂಗಾಯಿತ ಎರಡೂ ಒಂದೇ ಎಂದು ಪ್ರತಿವಾದಿಸಿದ್ದಾರೆ.
ವೀರಶೈವ, ಲಿಂಗಾಯಿತ ಧರ್ಮದಲ್ಲಿ ಎಲ್ಲಾ ಧರ್ಮಗಳ ಸಾರವನ್ನು ಒಳ ಗೊಂಡಿದೆ. ಆದರಿಂದ ಬೇರ್ಪಟ್ಟು ಏನೂ ಸಾಧಿಸಲಾ ಗುವುದಿಲ್ಲ. ಸಂಘಟಿತರಾಗಿದ್ದರೆ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ. ಆದರೆ, ಪಂಗಡಗಳನ್ನು ಬೇರೆ ಮಾಡುವ ಜನರ ಮಾತಿಗೆ ಬೆಲೆ ನೀಡಬೇಡಿ. ಒಕ್ಕೂಟ ದಿಂದ ಬೇರೆ ಹೋಗಬೇಡಿ ಎಂದು ಹೇಳಿದರು.
ಲಿಂಗಪೂಜೆ ಮರೆಯಬೇಡಿ: ದೇಶಕ್ಕೆ ಸಂವಿಧಾನವಿದ್ದಂತೆ ನಮ್ಮ ವೀರಶೈವ, ಲಿಂಗಾಯಿತ ಸಮುದಾಯಕ್ಕೆ ಜಗದ್ಗುರು ರೇಣುಕಾಚಾರೈರ ಹಾಗೂ ಬಸವಣ್ಣನವರ ತತ್ವ ಸಿದ್ಧಾಂತಗಳ ಸಂವಿಧಾನವಿದೆ. 125 ಶತಮಾನದಲ್ಲಿ ಬಸವಣ್ಣನವರು ಸಹ ಇಷ್ಟಲಿಂಗ ಧರಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದರು.
ರೇಣುಕಾಚಾರ್ಯರ ಹಾಗೂ ಬಸವಣ್ಣನವರ ಕಾಲದಂತೆ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯ ನಡೆಯುತ್ತಲೇ ಬಂದಿದೆ. ಲಿಂಗಧಾರಣೆಯನ್ನು ಶ್ರದ್ದೆಯಿಂದ ಮಾಡಿ, ಸ್ನಾನದ ಸಮಯದಲ್ಲಿಯೂ ಅದಕ್ಕೆ ಅಭಿಷೇಕದಂತೆ ಶುಭ್ರ ಮಾಡಿ, ಆಚರಣೆಯನ್ನು ನೆರವೇರಿಸಬೇಕಿದೆ ಎಂದರು.