ಚೆನೈ: ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ (Prabha mallikarjun) ಅವರು ಕೊಯಂಬತ್ತೂರಿನಲ್ಲಿರುವ ಅದ್ಭುತ ಆದಿಯೋಗಿ ಶಿವಾಲಯಕ್ಕೆ ಭೇಟಿ ನೀಡಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ನಗರವಲ್ಲದೆ ವೈವಿಧ್ಯಮಯ ಸಂಸ್ಕೃತಿಗೆ ಹೆಸರಾಗಿರುವ ಕೊಯಂಬತ್ತೂರಿನಲ್ಲಿರುವ ಅದ್ಭುತ ಆದಿಯೋಗಿ ಶಿವಾಲಯಕ್ಕೆ ಭೇಟಿ ನೀಡಲಾಯಿತು.
ಶಾಂತಿ, ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ಮಧ್ಯೆ ಕಳೆದ ಕ್ಷಣಗಳು ಅನನ್ಯ ಅನುಭವ ನೀಡಿದವು ಎಂದಿದ್ದಾರೆ.