Muharram festival banned in some villages in various taluks

ವಿವಿಧ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧ..!

ಬಳ್ಳಾರಿ: ಜಿಲ್ಲೆಯಾದ್ಯಾಂತ ಜೂನ್ 27 ರಿಂದ ಜುಲೈ 07 ರವರೆಗೆ ಜರುಗುವ ಮೊಹರಂ ಹಬ್ಬದ (Muharram Festival) ಆಚರಣೆಯನ್ನು ಜಿಲ್ಲೆಯ ವಿವಿಧ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಿಷೇಧಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶ ಹೊರಡಿಸಿದ್ದಾರೆ.

ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ವಿವಿಧ ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ವೈಶಮ್ಯ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮೊಹರಂ ಆಚರಿಸುವ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯಸ್ಥೆಗೆ ಧಕ್ಕೆ ಉಂಟಾಗುವ ಬಗ್ಗೆ ವರದಿಗಳು ಇರುವುದರಿಂದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಪೊಲೀಸ್ ಬಂದೋಬಸ್ತ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 (ಎ) (ಬಿ) (ಡಿ) (ಇ) ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿಗಳು, ಜೂನ್ 27 ರಿಂದ ಜುಲೈ 07 ರವರೆಗೆ ಆಚರಿಸಲ್ಪಡುವ ಮೊಹರಂ ಹಬ್ಬವನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ನಿಷೇಧಿಸಲಾಗಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಜನರು ಗುಂಪು ಸೇರದಂತೆ ಮೆರವಣಿಗೆ ನಡೆಸದಂತೆ ಮತ್ತು ಪಂಜಾಗಳನ್ನು ಕೂಡಿಸದಂತೆ ಮೊಹರಂ ಹಬ್ಬವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೊಹರಂ ಹಬ್ಬ ನಿಷೇಧಿಸಲ್ಪಟ್ಟ ಗ್ರಾಮಗಳು

ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಾಳೂರು ರಸ್ತೆಯ ಕನ್ನಡ ನಗರ ಮುಖ್ಯ ರಸ್ತೆಯ (ನ್ಯಾಯಾಧೀಶರ ವಸತಿಗೃಹ ಕಾಂಪೌಂಡ್ ಪಕ್ಕದಲ್ಲಿ) ಮಹಾನಂದಿಕೊಟ್ಟ ಒಳಗಡೆ.
ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸೂಗೂರು, ಮುದೇನೂರು, ಹೀರೆಹಾಳ್, ನಾಡಂಗ, ಬಂಡ್ರಾಳ್, ದೇಶನೂರು, ಕೆ.ಬೆಳಗಲ್, ಅಲಬನೂರು ಗ್ರಾಮಗಳು. ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರಹೊಸಳ್ಳಿ, ಉಡೇಗೋಳ, ಅರಳಿಗನೂರು ಗ್ರಾಮಗಳು.

ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಿರಿಗೇರಿ, ಕೂರಿಗನೂರು, ತಾಳೂರು, ಕರೂರು ಗ್ರಾಮಗಳು. ಪಿಡಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಸುಂಡಿ ಗ್ರಾಮ.

ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಂ.15-ಗೋನಾಳು ಗ್ರಾಮದಲ್ಲಿ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ನಿಷೇಧಿಸಲಾದ ಚಟುವಟಿಕೆಗಳು

ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಎ)ರಡಿ ಶಸ್ತç, ಬಡಿಗೆ, ಬರ್ಚಿ, ಗದೆ, ಬಂದೂಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತುವನ್ನು ಒಯ್ಯುವುದು. ಯಾವುದೇ ದಾಹಕ(ನಾಶಕಾರಿ) ಪದಾರ್ಥ ಇಲ್ಲವೇ ಸ್ಪೋಟಕ ವಸ್ತು ಒಯ್ಯುವುದು.
ಯಾವುದೇ ವ್ಯಕ್ತಿಗಳ ಭಾವ ಚಿತ್ರಗಳನ್ನು ಅವಮಾನಕಾರ ರೀತಿಯಲ್ಲಿ ಪ್ರದರ್ಶಿಸಬಾರದು.

ಬಹಿರಂಗವಾಗಿ ಘೋಷಣೆ ಮಾಡುವುದನ್ನು, ಪದ ಹಾಡುವುದನ್ನು, ವಾದ್ಯ ಬಾರಿಸುವುದನ್ನು, ವ್ಯಾಖ್ಯಾನ ಕೊಡುವುದನ್ನು, ಸನ್ನೆ ಪ್ರದರ್ಶನವನ್ನು, ಆ ಆಫೀಸರರ ಅಭಿಪ್ರಾಯದಲ್ಲಿ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಯಾವುದೇ ವಸ್ತು ಅಥವಾ ತಯಾರಿ ಪ್ರದರ್ಶನ ಅಥವಾ ಪ್ರಸಾರವನ್ನು ಪ್ರತಿಬಂಧಿಸುವುದು ಹಾಗೂ ಗುಂಪುಗೂಡಿ ಮೆರವಣಿಗೆ ಮಾಡುವುದು.

ಈ ಪ್ರತಿಬಂಧಕ ಆಜ್ಞೆಗೆ ವಿರುದ್ಧವಾಗಿ ಯಾರೊಬ್ಬರು ವರ್ತಿಸಿದರೆ, ಅವರು ಯಾವುದೇ ಪೊಲೀಸ್ ಅಧಿಕಾರಿಗಳಿಂದ ಇಂತಹ ವಸುಗಳನ್ನು ವಶ ಪಡಿಸಿಕೊಳ್ಳಲು ಪಾತ್ರರಾಗುವರು ಹಾಗೂ ಈ ರೀತಿ ಪಡೆಯಲ್ಪಟ್ಟ ಪದಾರ್ಥ ಸರ್ಕಾರಕ್ಕೆ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ರಾಜಕೀಯ

ರಾಜ್ಯ ಸರ್ಕಾರವನ್ನು ಕಡೆಗಣಿಸಿ ಸಿಗಂದೂರು ಸೇತುವೆ ಉದ್ಘಾಟನೆ.!?: ಪ್ರಧಾನಿಗೆ ಸಿಎಂ ಪತ್ರ

ರಾಜ್ಯ ಸರ್ಕಾರವನ್ನು ಕಡೆಗಣಿಸಿ ಸಿಗಂದೂರು ಸೇತುವೆ ಉದ್ಘಾಟನೆ.!?: ಪ್ರಧಾನಿಗೆ ಸಿಎಂ ಪತ್ರ

ರಾಜಕೀಯ ಕೆಸರೆರಚಾಟ, ಎಡಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ಸೋಮವಾರ ಮಧ್ಯಾಹ್ನ ಸಾಗರ ತಾಲೂಕಿನ ಸಿಗಂದೂರು ನೂತನ ತೂಗು ಸೇತುವೆಯನ್ನು (SigandooruBridge)

[ccc_my_favorite_select_button post_id="111123"]
ಕೆಎಸ್‌ಆರ್‌ಟಿಸಿಯ ವಿನೂತನ ಧ್ವನಿ ಸ್ಪಂದನೆ ಯೋಜನೆ ಚಾಲನೆ

ಕೆಎಸ್‌ಆರ್‌ಟಿಸಿಯ ವಿನೂತನ ಧ್ವನಿ ಸ್ಪಂದನೆ ಯೋಜನೆ ಚಾಲನೆ

ದೃಷ್ಟಿ ವಿಶೇಷ ಚೇತನರಿಗೆ KSRTC ಯ 200 ಬಸ್ಸುಗಳಲ್ಲಿ, ಅವರ ಆಯ್ಕೆಯ ಬಸ್ ಮಾರ್ಗವನ್ನು ಸೆಲೆಕ್ಟ್ ಮಾಡಲು ಧ್ವನಿ ಸ್ಪಂದನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (RamalingaReddy)

[ccc_my_favorite_select_button post_id="111154"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿಯಲ್ಲಿ (Drinks party) ಜತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

[ccc_my_favorite_select_button post_id="111121"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!