ದೆಹಲಿ: ಯೆಮೆನ್ ದೇಶದಲ್ಲಿ ಜು.16ರ ಬುಧವಾರ ಗಲ್ಲು ಶಿಕ್ಷೆಗೆ ಗುರಿಯಾಗಲಿರುವ ಕೇರಳದ ನರ್ಸ್ (Nurse) ನಿಮಿಷಾ ಪ್ರಿಯಾ (Nimisha priya) ಅವರನ್ನು ಶಿಕ್ಷೆಯಿಂದ ತಪ್ಪಿಸಲು ಸದ್ಯ ಏನೂ ಮಾಡಲು ಸಾಧ್ಯವಿಲ್ಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ಭಾರತ ಸರಕಾರ ಹೆಚ್ಚಿನದನ್ನೇನೂ ಮಾಡಲು ಈಗ ಸಾಧ್ಯವಿಲ್ಲ. ಯೆಮೆನ್ ದೇಶ ರಾಜತಾಂತ್ರಿಕವಾಗಿ ಭಾರತದ ಜತೆ ನಂಟು ಹೊಂದಿಲ್ಲ. ಹಾಗಾಗಿ, ಕೋರಿಕೆಗೆ ಭಾರತದ ಯೆಮೆನ್ ಸರಕಾರ ಸ್ಪಂದಿಸುತ್ತಿಲ್ಲ.
ಗಲ್ಲು ಶಿಕ್ಷೆ ಬದಲಿಗೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ಹಣ ನೀಡುವ ಬಗೆಗೂ ಮಾತುಕತೆ ನಡೆಸಲು ಯತ್ನಿಸಲಾಗಿದೆ. ಅಲ್ಲಿಯ ಶೇಖ್ ಜತೆಗೂ ಮಾತುಕತೆಗೆ ಪ್ರಯತ್ನಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಕೇಂದ್ರ ಸರಕಾರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಪೀಠಕ್ಕೆ ವಿವರಿಸಿದರು.
ಆ ಬಳಿಕ ಅರ್ಜಿ ವಿಚಾರಣೆಯನ್ನು ಪೀಠ ಶುಕ್ರವಾರಕ್ಕೆ ಮುಂದೂಡಿತು.
ಭಾರತದ ಸರಕಾರ ಮಧ್ಯಪ್ರವೇಶಿಸಿ ವಿಧಿಷಾ ಸರಕಾರಕ್ಕೆ ಗಲ್ಲು ಶಿಕ್ಷೆ ತಪ್ಪಿಸಲಿ, ಶಿಕ್ಷೆ ತಪ್ಪಿಸಲಿ, ಆ ಸಂಬಂಧ ಸಮ ನಿರ್ದೇಶನ ನೀಡುವಂತೆ ಕೋರಿ ಇಂಟರ್‌ನ್ಯಾಷನಲ್ ಆಕ್ಷನ್ ಕೌನ್ಸಿಲ್ ಎಂಬ ಸಂಸ್ಥೆ ನಿಮಿಷ ಪ್ರಿಯಾ ಪರವಾಗಿ ಸಾರ್ವಜನಿಕ `ಹಿತಾಸಕ್ತ ಅರ್ಜಿ ಸಲ್ಲಿಸಿದೆ.
ಕೇಂದ್ರ ಸರ್ಕಾರದ ಉತ್ತರದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಹೆಚ್ಚಾಗಿದ್ದು, ಇದೇನಾ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ, ಇರೋ ಬರೋ ದೇಶಕ್ಕೆ ಪ್ರವಾಸಕ್ಕೆ ತೆರಳುವ, ವಿಶ್ವ ಗುರು ಎಂದು ಕರೆಸಿಕೊಳ್ಳುವ ಪ್ರಧಾನಿ ಮೋದಿ ಅವರಿಗೆ ಭಾರತೀಯ ಮಹಿಳೆ ಜೀವನ್ಮರಣ ಹೋರಾಟ ನಡೆಸುವಾಗ ರಕ್ಷಿಸಲು ಆಗುವುದಿಲ್ಲ ಎಂದರೇ ಏನು ಅರ್ಥ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.