ತಿರುವನಂತಪುರಂ: ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಖ್ಯಾತ ನಟ ಮೋಹನ್ ಲಾಲ್ (Actor Mohanlal). ಆದರೆ ಅವರು ಕಳ್ಳತನದ ಆರೋಪಕ್ಕೆ ಗುರಿಯಾಗಿದ್ದಾರೆ.
ಮೋಹನ್ ಲಾಲ್ ಮಾಲಿವುಡ್ ಸಿನಿಮಾ ರಂಗ ಮಾತ್ರವಲ್ಲದೇ ಇಡೀ ದೇಶಕ್ಕೆ ಒಂದು ಹೆಮ್ಮೆಯ ನಟ ಎಂದರೆ ತಪ್ಪಾಗಲ್ಲ. ಅವರಿಗೆ ಯಾವುದೇ ಪಾತ್ರ ಕೊಟ್ಟರೂ ಸರಿ ಅದನ್ನ ಅದ್ಭುತವಾಗಿ ನಿಭಾಯಿಸುತ್ತಾರೆ.
ಆ ಪಾತ್ರಕ್ಕೊಂದು ಜೀವ ತುಂಬುವುದರಲ್ಲಿ ಮೋಹನ್ ಲಾಲ್ ಮೊದಲಿಗರು. ಆದರೆ ಇದೀಗ ಆಭರಣದ ಈ ಜಾಹೀರಾತಿನಲ್ಲಿ ಬೆಲೆಬಾಳುವ ವಜ್ರಾಭರಣವನ್ನು ಕದ್ದಿದ್ದಾರೆ.
Believe me this acting masterclass just from AD #Mohanlal𓃵pic.twitter.com/92M6Tc3Sed
— Mani_King™ (@Mani12811220) July 19, 2025
ನಿಜ ಅಂದ್ಕೊಂಡ್ರಾ..? ಆತಂಕಕ್ಕೆ ಒಳಗಾಗಬೇಡಿ ಅದು ಇತ್ತೀಚೆಗೆ ಬಿಡುಗಡೆಯಾದ ಆಭರಣದ ಜಾಹೀರಾತಿನಲ್ಲಿ (Jewelry Advertisement) ಮೋಹನ್ ಲಾಲ್ ಅವರ ಅಭಿನಯವಾಗಿದೆ.
ಈ ಜಾಹೀರಾತನ್ನು ಜನಪ್ರಿಯ ಜಾಹೀರಾತು ನಿರ್ಮಾಪಕ ಪ್ರಕಾಶ್ ವರ್ಮಾ ನಿರ್ದೇಶಿಸಿದ್ದು, ಇದರಲ್ಲಿ ಭಾವಾಭಿವ್ಯಕ್ತಿಯ ಮೂಲಕ ಅವರು ಎಲ್ಲವನ್ನೂ ಹೇಳಿದ್ದಾರೆ ಎನ್ನಬಹುದು.
ಸುಮಾರು 2 ನಿಮಿಷಗಳ ಈ ಜಾಹೀರಾತಿನಲ್ಲಿ ಮೋಹನ್ ಲಾಲ್ ಕಾಣಿಸಿಕೊಂಡಿದ್ದು, ಬಹಳ ಅದ್ಭುತವಾಗಿ ಮೂಡಿ ಬಂದಿದೆ.
ಈ ಜಾಹೀರಾತಿನಲ್ಲಿ ಮೋಹನ್ ಲಾಲ್ ಪ್ರಕಾಶ್ ವರ್ಮಾ ಅವರ ಜೊತೆ ಶೂಟಿಂಗ್ ಮಾಡಲು ಬರುತ್ತಾರೆ. ಅಲ್ಲಿ ಅವರಿಗೆ ಒಂದು ಸುಂದರವಾದ ನೆಕ್ಸಸ್ ಸೆಟ್ ಕಾಣಿಸುತ್ತದೆ. ಅದನ್ನ ಯಾರಿಗೂ ತಿಳಿಯದಂತೆ ಎಗರಿಸಿಕೊಂಡು ಹೋಗಿದ್ದಾರೆ.
ಕ್ಯಾರಾವಾನ್ಗೆ ಹೋಗಿ ಆ ಆಭರಣಗಳನ್ನು ಧರಿಸಿ ಅದ್ಭುವಾಗಿ ಭಾವನೆಗಳ ಮೂಲಕ ಆಭರಣಗಳ ಮಹತ್ವವನ್ನ ವಿವರಿಸಿದ್ದು, ಅದನ್ನ ಧರಿಸಿ ಮಹಿಳೆಯರು ಯಾವ ರೀತಿ ಭಾವನೆಗಳನ್ನ ವ್ಯಕ್ತಪಡಿಸುತ್ತಾರೆ ಎಂಬುದನ್ನ ಸಹ ತೋರಿಸಿದ್ದಾರೆ.
ಸೊಗಸಾದ ನೃತ್ಯವನ್ನು ಸಹ ಪ್ರದರ್ಶಿಸುತ್ತಾರೆ. ಮೋಹನ್ ಲಾಲ್ ತಮ್ಮ ಮೌನ ಅಭಿನಯದಿಂದ ಪರದೆಯ ಮೇಲೆ ಮಿಂಚನ್ನ ಹರಿಸಿದ್ದಾರೆ. ಈ ಮೂಲಕ ಆಭರಣ ಜಾಹೀರಾತಿಗೆ ಹೊಸ ಆಯಾಮವನ್ನ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಆಭರಣಗಳ ಜಾಹೀರಾತಿನಲ್ಲಿ ಮಹಿಳೆಯರನ್ನ ತೋರಿಸಲಾಗುತ್ತದೆ. ಅವರಿಗೆ ಆಭರಣಗಳನ್ನ ಧರಿಸಿದರೇ ಎಷ್ಟು ಸಂತೋಷವಾಗುತ್ತದೆ ಎಂಬುದನ್ನ ಚಿತ್ರಿಸಲಾಗುತ್ತದೆ. ಆದರೆ ಈ ಬಾರಿ ಬಹಳ ವಿಭಿನ್ನವಾಗಿ ಮಾಡಿದ್ದು ಮೋಹನ್ ಲಾಲ್ ಹಾಗೂ ಪ್ರಕಾಶ್ ವರ್ಮಾ ಈ ಪ್ರಯತ್ನಕ್ಕೆ ಅನೇಕ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಜಾಹೀರಾತು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಮೋಹನ್ ಲಾಲ್ ಅವರ ಪಾತ್ರಗಳನ್ನು ಸಲೀಸಾಗಿ ಬದಲಾಯಿಸುವ ಸಾಮರ್ಥ್ಯ ನೋಡಿ ಅನೇಕ ಜನರು ಪ್ರಭಾವಿತರಾಗಿದ್ದಾರೆ.
ಇನ್ನು ಅಭಿಮಾನಿಗಳು ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎನ್ನುವ ಹ್ಯಾಷ್ ಟ್ಯಾಗ್ ಸಹ ಬಳಕೆ ಮಾಡುತ್ತಿದ್ದು, ನಟನನ್ನ ಹಾಡಿ ಹೊಗಳುತ್ತಿದ್ದಾರೆ.