ಕೊಪ್ಪಳ: ಎತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ, ಪೂಜ್ಯ ತಂದೆಯವರಿಗೆ ಅವರ ಮಗನೆ ಮುದ್ದು. ಆದರೆ ರಾಜ್ಯದ ಜನ ಅವನ ನಾಯಕತ್ವ ತಿರಸ್ಕರಿಸಿದ್ದಾರೆ. ಅವನ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಬಿಜೆಪಿಗೆ 30 ಸೀಟ್ ಸಿಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patila Yatnal) ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲೆ ಇದ್ದೀನಿ, ಬಿಟ್ಟು ಹೋಗಿಲ್ಲ, ಯಡಿಯೂರಪ್ಪ, ಅವರ ಮಗನ ಭವಿಷ್ಯಕ್ಕಾಗಿ ನಮ್ಮನ್ನ ಪಕ್ಷದಿಂದ ಹೊರಗಾಕಿದ್ದಾರೆ.
ಯಡಿಯೂರಪ್ಪಗೆ ತಾನಿರಬೇಕು, ತಾ ಸತ್ತಮೇಲೆ ಅವರ ಮಗ ಇರಬೇಕು, ಅವ ಸತ್ತ ಮೇಲೆ ಅವರ ಮೊಮ್ಮಗ ಇರಬೇಕು. ಮಿಕ್ಕಿದವರೆಲ್ಲ ಅವರ ಮನೆ ಕಸಗುಡಿಸಬೇಕು. ನಮಗೇನ್ ಕೆಲಸ ಇಲ್ಲವೇನು ಎಂದು ಪ್ರಶ್ನಿಸಿದರು.
ಕೆಲವೊಂದು ಅಪ್ಪಾಜಿ ಎನ್ನುವ ಅಯೋಗ್ಯ ನನ್ ಮಕ್ಕಳು ರಾಜಕಾರಣದಲ್ಲಿದ್ದಾರೆ. ಜನ್ಮಕೊಟ್ಟವರ ಅಪ್ಪ ಎನ್ನಬೇಕು. ಇಲ್ಲವೇ ದೊಡ್ ದೊಡ್ ಜಗತ್ ಗುರುಗಳನ್ನು ಅಪ್ಪಾಜಿ ಎಂದರೆ ತಪ್ಪಲ್ಲ. ಆದರೆ ಹಾದಿಬೀದಿ ಹೋಗೋರನ್ನೇಲ್ಲ ಅಪ್ಪಾಜಿ ಎಂದರೆ. ಬಿಜೆಪಿನ ಹಾಳು ಮಾಡಿದವರೇ ಈ ಅಪ್ಪಾಜಿ ಕಂಪನಿಯವರು ಎಂದರು.
ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾಗಬೇಕು, ನಾವು ಹೋರಾಟ ಮಾಡುತ್ತಿರೋದೆ ಈ ಕಾರಣಕ್ಕೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿಲ್ಲವೇ..? ಪಕ್ಷದಲ್ಲಿ ವಂಶವಾದ ಮತ್ತು ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂದು. ಅದನ್ನು ನಡೆದುಕೊಳ್ಳುವಂತೆ ಹೇಳುತ್ತೇವೆ. ಇಲ್ಲವಾದರೆ ಡಿಕ್ಲೇರ್ ಮಾಡಿಬಿಡಿ, ಬಿಜೆಪಿಯಲ್ಲಿ ವಂಶಾಡಳಿತ, ಭ್ರಷ್ಟಾಚಾರ ನಡೆಯುತ್ತೆ ಎಂದು.
ವಿಜಯೇಂದ್ರ ಒಬ್ಬನನ್ನು ಬಿಟ್ಟು ಯಾರನ್ನೇ ರಾಜ್ಯಾಧ್ಯಕ್ಷನ ಮಾಡಿದರರೂ ಸಮಸ್ಯೆ ಇಲ್ಲ. ಒಡೆದ ಮನಸ್ಸುಗಳು ಒಂದಾಗಬೇಕಾದರೆ ಒಳ್ಳೆಯ ನಾಯಕತ್ವ ಬೇಕು, ನಾಯಕತ್ವವೇ ಸರಿಯಿಲ್ಲದಿದ್ದರೆ ಯಾರು ಒಂದಾಗಿ ಏನು ಪ್ರಯೋಜನ?
ಯಡಿಯೂರಪ್ಪ ಮತ್ತು ವಿಜಯೇಂದ್ರ ತಾವು ರೈತನ ಮಕ್ಕಳು ಅಂತ ಹೇಳುತ್ತಾರೆ, ಹಾಗಾದರೆ ನಾವೇನು ಎಮ್ಮೆಯ ಮಕ್ಕಳೇ? ಎಂದು ಯತ್ನಾಳ್ ಲೇವಡಿ ಮಾಡಿದರು.
ರಾಮುಲು ಮಂತ್ರಿ ಅವರ ಭವಿಷ್ಯ ಹಾಳು ಮಾಡಿ ವ್ಯಕ್ತಿ ವಿಜಯೇಂದ್ರ, ಮತ್ತೆ ಅವನಿಗೆ ಜೈ ಎಂತಾರೆ ಅಂದರೆ ವಿಷಾದಕರ ಸುದ್ದಿ ಎಂದರು.
ರಾಜ್ಯದಲ್ಲಿ ಬಿಜೆಪಿಗೆ ಪ್ರಾಮಾಣಿಕ ನಾಯಕ ಬೇಕಾಗಿದೆ. ಈ ಡಂಬಾಚಾರದ ನಾಯಕತ್ವ ಬೇಕಿಲ್ಲ. ಇಡೀ ಕರ್ನಾಟಕದಲ್ಲಿ ವಿಜಯೇಂದ್ರನ ನಾಯಕತ್ವವನ್ನು ಯಾರು ಒಪ್ಪುತ್ತಿಲ್ಲ. ಅನೇಕ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಇರುವ ಕರ್ನಾಟಕದಲ್ಲಿ ಮಾಡಲು ಸಾಧ್ಯವಾಗದೇ ಇರುವುದು ಈ ವ್ಯಕ್ತಿ ಬೇಡ ಎನ್ನುವುದಾಗಿದೆ. ಇವನ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 30 ಸ್ಥಾನ ಬರಲ್ಲ ಎಂಬುದೇ ಕಾರಣ.
ಬಿಜೆಪಿಯವರು ವಿಜಯೇಂದ್ರನ ಮತ್ತೆ ತಲೆ ಮೇಲೆ ಕೂರಿಸಿಕೊಂಡರೆ, ವಿಜಯದಶಮಿಗೆ ಪಕ್ಷವನ್ನು ಕಟ್ಟುವುದು ಗ್ಯಾರಂಟಿ, ನಮ್ಮ ಸರ್ಕಾರಕ್ಕೆ ಬಹುಮತ ಬರುವುದು ಗ್ಯಾರಂಟಿ, ಕರ್ನಾಟಕ ಉದ್ದಾರ ಆಗೋದು ಗ್ಯಾರಂಟಿ.
ವಿಜಯೇಂದ್ರನ ಬದಲಾವಣೆ ಮಾಡುವುದು ಬಿಡುವುದು ಅವರ ಪಾರ್ಟಿಗೆ ಸಂಭಂದಿಸಿದ ವಿಷಯ. ಅವ ಅಯೋಗ್ಯ ಇದ್ದಾನ, ಭ್ರಷ್ಟ ಇದ್ದಾನ ಅಂತ ನಾವು ಹೇಳಿದ್ದೇವೆ. ಆದರೂ ಅವನೇ ಬೇಕು ಎಂದರೆ ನಾವೇನು ಮಾಡುವುದು ಎಂದು ಯತ್ನಾಳ್ ಹೇಳಿದರು.