ತಿರುಮಲ: ತಿರುಮಲದಲ್ಲಿ (Tirumala) ತಿಮ್ಮಪನ್ನ ಶೀಘ್ರ ದರ್ಶನ ಸೇವೆಗಾಗಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಹೊಸದಾಗಿ ‘ಶ್ರೀವಾಣಿ ದರ್ಶನ’ ಟಿಕೆಟ್ ಸೇವೆಯನ್ನು ಬುಧವಾರ ಆರಂಭಿಸಿದೆ.
ಟಿಕೆಟ್ ವಿತರಣಾ ಕೇಂದ್ರವನ್ನು ತಿರುಮಲ ದಲ್ಲಿನ ಅನ್ನಮಯ್ಯ ಭವನದ ಎದುರು ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ, ಟಿಕೆಟ್ ಸುಲಭ ವಿತರಣೆಗಾಗಿ 60 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಗಳನ್ನು ಒಳಗೊಂಡ ಹೊಸ ಕೌಂಟರ್ಗಳನ್ನು ನಿರ್ಮಿಸಲಾಗಿದೆ ಎಂದರು.
ಶ್ರೀವಾಣಿ ದರ್ಶನ ಟಿಕೆಟ್ಗಾಗಿ ಭಕ್ತರು ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಆಹಾರ ಪದಾರ್ಥಗಳ ಗುಣ ಮಟ್ಟ ಪರೀಕ್ಷೆಗೆಂದೇ ಅತ್ಯಾಧುನಿಕ ಪ್ರಯೋಗಾಲಯ ಸಜ್ಜುಗೊಳಿಸಲಾಗಿದೆ.