ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ಸಂಸ್ಥೆಗಳಾದ ನಳಂದ ಪ್ರೌಢಶಾಲೆ (Nalanda High School) ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ (Little Angels Anantha School) ಕಾರ್ಗಿಲ್ ವಿಜಯ ದಿವಸವನ್ನು (kargil vijay diwas) ಈ ದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಮೊಂಬತ್ತಿ ಹಿಡಿದು ಹುತಾತ್ಮರಾದ ಕಾರ್ಗಿಲ್ ವೀರಯೋಧರಿಗೆ ಗೌರವವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ಅವರು, ಕಾರ್ಗಿಲ್ ಯುದ್ಧವು ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದೆ. ಇದು ಭಾರತೀಯ ಸೇನೆಯ ಶೌರ್ಯ ಮತ್ತು ದೇಶಭಕ್ತಿಯ ಸಾಕ್ಷಿಯಾಗಿದೆ.

ಕಾರ್ಗಿಲ್ ವಿಜಯೋತ್ಸವ ವನ್ನು ಪ್ರತಿ ವರ್ಷ ಆಚರಿಸುವ ಮೂಲಕ ನಾವು ಈ ಯುದ್ಧದಲ್ಲಿ ಹುತಾತ್ಮರಾದ 527 ಸೈನಿಕರನ್ನು ಸ್ಮರಿಸುತ್ತೇವೆ ಮತ್ತು ಅವರ ತ್ಯಾಗವನ್ನು ಗೌರವಿಸುತ್ತೇವೆ . ಈ ದಿನ ನಾವು ಶಾಂತಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ವೀರಯೋಧರ ತ್ಯಾಗ, ಬಲಿದಾನ ಕಾರಣ ಎಂದರು.

ಈ ಸಂದರ್ಭದಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರ ರವರು ಯುದ್ಧಕ್ಕೆ ಹೊರಡುವ ಮೊದಲು ನುಡಿದಂಥಹ “ಯುದ್ಧದ ನಂತರ ನಾನು ತ್ರಿವರ್ಣ ಧ್ವಜವನ್ನು ಕಾರ್ಗಿಲ್ ನಲ್ಲಿ ಹಾರಿಸಿ ವಾಪಸ್ ಬರುತ್ತೇನೆ ಅಥವಾ ಅದೇ ತ್ರಿವರ್ಣ ಧ್ವಜದಲ್ಲಿ ನನ್ನ ದೇಹವನ್ನು ಸುತ್ತಿಸಿಕೊಂಡು ಇಲ್ಲಿಗೆ ವಾಪಸ್ ಆಗುವೆ” ಎಂದು ಹೇಳಿದ ಮಾತುಗಳು ಅನೇಕರಿಗೆ ಸ್ಪೂರ್ತಿ ನೀಡಿದ್ದು ಭಾರತೀಯ ಸೈನಿಕರ ಶೌರ್ಯದ ಪ್ರತೀಕ ವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಡಿದ ದೇಶಭಕ್ತಿ ಗೀತೆಗಳು, ಮೊಂಬತ್ತಿ ಹಿಡಿದು ನಡೆಸಿದ ಪಥ ಸಂಚಲನ ಹಾಗೂ ಸೈನಿಕರ ವೇಷ ಭೂಷಣವನ್ನು ತೊಟ್ಟು ಜೀವಂತ ಟ್ಯಾಬ್ಲುಗಳಾಗಿ ನಿಂತಿದ್ದು ವಿದ್ಯಾರ್ಥಿಗಳಲ್ಲಿದ್ದ ಅಚಲ ದೇಶಪ್ರೇಮವನ್ನು ಸಾರಿ ಹೇಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅನಿತಾ ಕೆ ಪಿ ಸುನಿತಾ ಪಿ ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.