ಗೌರಿಬಿದನೂರು: ಬಡ, ಮಧ್ಯಮ ವರ್ಗದವರಾದ ಗೌರಿಬಿದನೂರು ತಾಲೂಕಿನ ಮೆಕ್ಯಾನಿಕ್‌ಗಳಿಗೆ ಶೀಘ್ರದಲ್ಲೇ ರೂ.4 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಮೆಕ್ಯಾನಿಕ್ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ (K.H. Puttaswamy Gowda) ಹೇಳಿದರು.
ನಗರದ ಇಸ್ಲಾಮಿಯ ಬೈತುಲ್‌ಮಾಲ್, ಶಾದಿಮಹಲ್ ನೇತಾಜಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ದ್ವಿಚಕ್ರ ವಾಹನ ವರ್ಕ್‌ಷಾಪ್ ಮಾಲೀಕರ ಮತ್ತು ತಂತ್ರಜ್ಞರ ಸಂಘ, ಗೌರಿಬಿದನೂರು ದ್ವಿಚಕ್ರ ವಾಹನ ರಿಪೇರಿಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ 7ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ BS.6 ತರಬೇತಿ ಹಾಗೂ ಲೇಬರ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೆಕ್ಯಾನಿಕ್‌ಗಳು ಕಾರ್ಮಿಕ ಕಾರ್ಡ್ ಮಾಡಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಿದೆ. ನಿಮ್ಮ ಯಾವುದೇ ಸಮಸ್ಯೆಗಳಿಗೆ ಜೊತೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದ ಶಾಸಕ ಪುಟ್ಟಸ್ವಾಮಿ ಗೌಡ, ಮುಂದಿನ ದಿನಗಳಲ್ಲಿ ಒಟ್ಟಿಗೆ ಅಲ್ಲದೇ ಇದ್ದರು ಹಂತ ಹಂತವಾಗಿ ಮೆಕ್ಯಾನಿಕ್ ಕಿಟ್‌ಗಳನ್ನು ಎಲ್ಲರಿಗೂ ನೀಡಲಾಗುವುದು ಎಂದರು.
ದ್ವಿಚಕ್ರ ವಾಹನಗಳ ರಿಪೇರಿ ಮಾಡುವ ಮೂಲಕ ಪರೋಕ್ಷವಾಗಿ ಮೆಕ್ಯಾನಿಕ್‌ಗಳು ಕೂಡ ಮಧ್ಯಮ ವರ್ಗದ ಸೇವೆಯನ್ನು ಮಾಡುತ್ತಿದ್ದಾರೆ. ಇಷ್ಟು ಜನ ಒಗ್ಗೂಡಿ ಸಂಘವನ್ನು ಕಟ್ಟಿಕೊಂಡು ಅನ್ಯೋನ್ಯವಾಗಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದ ಅಂಗವಾಗಿ ಮೆಕ್ಯಾನಿಕ್‌ಗಳಿಗೆ ಬೆಳಿಗ್ಗೆ 9-00 ರಿಂದ ಸಂಜೆ 4-00 ರವರೆಗೆ BS.6 ತರಬೇತಿ ನೀಡಲಾಯಿತು.
ಈ ವೇಳೆ ಕೆ.ಟಿ.ಡಬ್ಲ್ಯೂ.ಓ.ಟಿ.ಎ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್ ಗೌಡ, ಉಪಾಧ್ಯಕ್ಷ ಜಗದೀಶ್, ಸಂಸ್ಥಾಪಕ ಕಾರ್ಯದರ್ಶಿ ಭಾಸ್ಕರ್ ಬಿ. ನಾಯ್ಡು, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಮುಬಾರಕ್ ಪಾಷ (ಫೀರೋಜ್), ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ದೇವರಾಜ್, ಗೌರಿಬಿದನೂರು ದ್ವಿಚಕ್ರ ವಾಹನ ರಿಪೇರಿಗಾರರ ಸಂಘ ಗೌರವ ಅಧ್ಯಕ್ಷ ಅಬುಸಾಲೇಹಾ, ಅಧ್ಯಕ್ಷ ಸಿಕಂದರ್ ಎಸ್.ಎ., ಉಪಾಧ್ಯಕ್ಷ ಸಾದಿಕ್, ಕಾರ್ಯದರ್ಶಿ ಕಿಫಾಯತ್, ಜಂಟಿ ಕಾರ್ಯದರ್ಶಿ ಸಾದಿಕ್, ಖಜಾಂಚಿ ನೂರುಲ್ಲಾ, ಕಾರ್ಯಾಗಾರ ನಿರ್ದೇಶಕ ಎಂ.ಬಿ. ದಿನೇಶ್ ಕುಮಾರ್, ನಿರ್ದೇಶಕರಾದ ಗಂಗಾಧರಪ್ಪ, ಸೈಯದ್, ಸದಸ್ಯ ಫೈರೋಜ್ ಮತ್ತಿತರರಿದ್ದರು.