ಶ್ರೀನಗರ: ‘ಪಹಲ್ಗಾಮ್ ಭಯೋತ್ಪಾದಕ ದಾಳಿ’ಯ (Pahalgam attacker) ಪ್ರಮುಖ ಸೂತ್ರದಾರ ಸುಲೇಮಾನ್ ಶಾ ಸೇರಿದಂತೆ ಮೂವರು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದ ಡಚಿಗಮ್ ಬಳಿಯ ಹರ್ವಾನ್ ಅರಣ್ಯದಲ್ಲಿ ಜಂಟಿ ಭದ್ರತಾ ಪಡೆಗಳು ಸೋಮವಾರ ಹೊಡೆದುರುಳಿಸಿವೆ.
‘ಆಪರೇಷನ್ ಮಹದೇವ್’ ಹೆಸರಿನಲ್ಲಿ ನಡೆದ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಯ ಒಂದು ಭಾಗ ಯಶಸ್ವಿಯಾಗಿದೆ. ಸುಲೇಮಾನ್ ಶಾ ಜತೆಗಿದ್ದ ಇಬ್ಬರು ಉಗ್ರರೂ ಹತರಾಗಿದ್ದು, ಅವರನ್ನು ಅಬು ಹವ್ವಾ ಮತ್ತು ಯಾಸಿರ್ ಎಂದು ಗುರುತಿಸಲಾಗಿದೆ.
ಎರಡೂ ಕಡೆಯಿಂದ ಗಂಟೆಗಳ ಕಾಲ ಭಾರೀ ಗುಂಡಿನ ಚಕಮಕಿ ನಡೆದಿದೆ. ಕಡೆಗೂ ಭದ್ರತಾ ಪಡೆಗಳ ಯೋಧರು ಮೂವರು ಭಯೋತ್ಪಾದಕರಿಗೆ ಗುಂಡಿಕ್ಕಿ ಸಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಸಂಜೆಯ ಬಳಿಕವೂ ಉಳಿದ ಉಗ್ರರಿಗಾಗಿ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿತ್ತು ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಆಫ್ ಆರ್ಮಿ ಹೆಸರಿನ ‘ಎಕ್ಸ್’ ಖಾತೆಯಲ್ಲಿ ವಿವರಿಸಲಾಗಿದೆ.
ಏ.22ರಂದು ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಯಾಮ್ ಸಮೀಪದ ಹೆಸರಾಂತ ಪ್ರವಾಸಿ ತಾಣ ಬೈಸರನ್ ಹುಲ್ಲುಗಾವಲಿನಲ್ಲಿ ಹಿಂದೂ ಮತ್ತು ಕ್ರೈಸ್ತ ಪ್ರವಾಸಿಗ ಪುರುಷರನ್ನು ಪ್ರತ್ಯೇಕವಾಗಿ ಗುರುತಿಸಿ ತಲೆಗೆ ಗುಂಡಿಕ್ಕಿ ಕೊಂದು ಕೇಕೆ ಹಾಕಿದ್ದ ಪಾಕಿಸ್ತಾನದ ಮೂಲದ ಉಗ್ರರಲ್ಲಿ ಒಬ್ಬನಾದ ಸುಲೇಮಾನ್ ಶಾನನ್ನು ಕಡೆಗೂ ಕೊಂದು ಹಾಕಲಾಗಿದೆ.
ಮತ್ತಷ್ಟು ದಾಳಿಗೆ ಸಂಚು: ಸುಲೇಮಾನ್ ಶಾ ಮಾತ್ರವಲ್ಲ, ಹತರಾದ ಮತ್ತಿಬ್ಬರು ಉಗ್ರರೂ ಪಾಕಿಸ್ತಾನ ಮೂಲದವರೇ ಆಗಿದ್ದಾರೆ. ಕಾಶ್ಮೀರದ ವಿವಿಧೆಡೆ ಮತ್ತಷ್ಟು ಭಯೋತ್ಪಾದಕ ದಾಳಿ ನಡೆಸುವುದಕ್ಕೆ ಸಂಚು ನಡೆಸಿ ಹರ್ವಾನ್ ಅರಣ್ಯದಲ್ಲಿ ಅಡಗಿಕೊಂಡಿದ್ದರು ಎಂಬುದು ಉಗ್ರರ ಅಡಗುತಾಣದಲ್ಲಿ ಸಿಕ್ಕ ಗ್ರನೇಡ್‌ಗಳು, ಮದ್ದುಗುಂಡುಗಳ ಸಂಗ್ರಹ ಮತ್ತು ನಕ್ಷೆಗಳು ಮತ್ತಿತರ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ತಿಳಿದುಬಂದಿದೆ.
The Indian Armed Forces avenged the Pahalgam attack by kil!!ng the I$lamic terrorist Hashim Musa, alias Suleiman Shah, belonging to Lashkar-e-Taiba (LeT), in an encounter near Srinagar along with two more terrorists today. Hashim Musa was Ex-commando of Pakistan's elite unit SSG,… pic.twitter.com/iAACt7KGZH
— Avinash Srivastava (@go4avinash) July 28, 2025
‘ಆಪರೇಷನ್ ಮಹಾದೇವ್’ ಹೆಸರೇ ಏಕೆ?
ಪಹಲ್ದಾಮ್ ದಾಳಿಕೋರರ ಬೇಟೆಗಾಗಿ ಹಲವು ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಜಂಟಿ ಭದ್ರತಾ ಪಡೆಗಳ ಸೋಮವಾರದ ಕಾರ್ಯಾಚರಣೆಗೆ ‘ಆಪರೇಷನ್ ಮಹಾದೇವ್’ ಹೆಸರಿಡಲಾಗಿತ್ತು. ಎಲ್ಲಾ ದೇಶಗಳ ಪ್ರಮುಖ ಸೇನಾ ಕಾರ್ಯಾಚರಣೆಗಳಿಗೆ ಸಂಕೇತನಾಮ ನೀಡಲಾಗುತ್ತದೆ.