ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ (Mantralaya Raghavendra Swamy Math) ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದೆ. ಮಠದಲ್ಲಿ ಮೊದಲ ಬಾರಿಗೆ 5.46 ಕೋಟಿ ರು. ದಾಖಲೆಯ ಕಾಣಿಕೆ ಸಂಗ್ರಹಗೊಂಡಿದೆ.
ಕಳೆದ 35 ದಿನಗಳಲ್ಲಿ ಒಟ್ಟು 5,46,06,555 ರು. ಕಾಣಿಕೆ ಸಂಗ್ರಹವಾಗಿತ್ತು. ಒಟ್ಟು ಕಾಣಿಕೆಯಲ್ಲಿ 5,30,92,555 ರು. ನೋಟುಗಳು. 15,14,000 ರು. ನಾಣ್ಯಗಳಿವೆ. 127 ಗ್ರಾಂ ಚಿನ್ನ, 1820 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.
ಜೂನ್ ತಿಂಗಳಲ್ಲಿ ಒಟ್ಟು 5 ಕೋಟಿ 28 ಲಕ್ಷ 39,538 ರು. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ಆ ದಾಖಲೆಯನ್ನು ಮುರಿದು ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ಕರ ಸೇವಕರು, ಮಠದ ಭಕ್ತರು, ಮಠದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿರುವುದಾಗಿ ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ.