ಜಮ್ಮು: ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡ ಸುಮಾರು 22 ಮಕ್ಕಳನ್ನು ‘ದತ್ತು’ ಪಡೆಯುವುದರೊಂದಿಗೆ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಮೇ 7 ರಿಂದ 10ರ ವರೆಗೆ ಪೂಂಚ್, ರಜೆರಿಯಲ್ಲಿ ನಡೆದ ಶೆಲ್ಡಿಂಗ್ ವೇಳೆ ಹಲವು ಸಾವು, ಹಾನಿಗಳು ಸಂಭವಿಸಿವೆ. ಘಟನೆಯ ಬಳಿಕ ರಾಹುಲ್ ಗಾಂಧಿ ಸ್ಥಳಕ್ಕೆ ತೆರಳಿ, ಸಂಕಷ್ಟಕ್ಕೀಡಾದ ಕುಟುಂಬಗಳನ್ನು ಭೇಟಿಯಾಗಿದ್ದಾರೆ.
ಪೋಷಕರನ್ನು ಕಳೆದುಕೊಂಡ ಮಕ್ಕಳು ಶಾಲೆಗೆ ಹೋಗುವಂತೆ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಅದರಂತೆ ಪೋಷಕರನ್ನು ಕಳೆದುಕೊಂಡ ಮಕ್ಕಳ ಪಟ್ಟಿಯನ್ನು ಒದಗಿಸಲಾಗಿದೆ ಎಂದು ಮೂರು ದಿನಗಳ ರಜೆರಿ ಭೇಟಿಯಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಹೇಳಿದ್ದಾರೆ.
BREAKING 🚨
— Ashish Singh (@AshishSinghKiJi) July 29, 2025
JanNayak Shri Rahul Gandhi has decided to adopt 22 children who lost the parents during India Pakistan war on Palangam Terror Attack!
It's really amazing ! Thank you Rahul bhaiya ❤️ pic.twitter.com/bHPnnfZUYJ
ಪೂಂಚ್ ಜಿಲ್ಲೆಯೊಂದರಲ್ಲೇ 22 ಮಕ್ಕಳನ್ನು ಪಟ್ಟಿಮಾಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಪೋಷಕರನ್ನು ಕಳೆದುಕೊಂಡ ಇನ್ನಷ್ಟು ಮಕ್ಕಳನ್ನು ಪಟ್ಟಿ ಮಾಡಲಾಗುವುದು. ಪೂಂಚ್ ಜಿಲ್ಲೆಯಲ್ಲೇ 13 ಸಾರ್ವಜನಿಕರು ಸೇರಿ 28 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.