ಬೆಂಗಳೂರು: ಎಲ್ಲಿರಿಗೂ ಆತ್ಮ ಗೌರವ ಅನ್ನೋದ್ ಇರುತ್ತೆ. ಯಾರೋ ಒಬ್ಬರು ಡೌನ್ ಆದ ತಕ್ಷಣ ಆಳಿಗೊಂದು ಕಲ್ಲು ಎಂಬಂತೆ ಹಾಕಬಾರದು. ಈ ವಿಷಯದಲ್ಲಿ ನಾನು ದರ್ಶನ್ (Darshan) ಸರ್ ಪರವಾಗಿ ನಿಲ್ಲುತ್ತೇನೆ ಎಂದು ನಟ ಧೃವ ಸರ್ಜಾ (Dhrva sarja) ಹೇಳಿದ್ದಾರೆ.
ಇತ್ತೀಚಿನ ಬೆಳವಣಿಗೆ ಕುರಿತು ಮಾತಾಡುವಂತೆ ಖಾಸಗಿ ಚಾನಲ್ ವರದಿಗಾರರು ಒತ್ತಾಯಿಸಿದಾಗ ಮಾತನಾಡಿದ ಅವರು, ಮೊದಲನೇಯದಾಗಿ ರಮ್ಯಾ ಮೆಡಮ್ ಅವರಿಗೆ ಅಭಿಪ್ರಾಯ ಹೇಳುವ ಅವಕಾಶವಿದೆ. ಆದರೆ ಅವರಿಗೆ ಹಾಕಿದ ಮೆಸೇಜ್ ತಪ್ಪು. ಈ ಕುರಿತು ದೂರನ್ನು ನೀಡಿದ್ದಾರೆ. ನಾವೆಲ್ಲ ಅವರ ಪರ ನಿಲ್ಲುತ್ತೇವೆ.
ಎರಡ ವಿಚಾರ ತುಂಬಾ ಬೇಜಾರ್ ಆಗಿದೆ. ಪ್ರಥಮ್ ಸರ್ ಅವರ ವರ್ತನೆ ವಿಚಾರವಾಗಿ ನಮ್ಮ ಡ್ಯೂಟಿ ನಾವು ದರ್ಶನ್ ಸರ್ ಪರ ನಿಲ್ಲುತ್ತೇನೆ.
ಇನ್ನೂ ಪ್ರಥಮ್ ಅವರಿಗೆ ಯಾರೋ ಡ್ರಾಗನ್ ತೋರಿಸಿದ್ದರು, ಬೆದರಿಸಿದರು ಎಂದು ಅವರೇ ಹೇಳಿದ್ದು, ದೂರು ನೀಡಿಲ್ಲ, ಎಫ್ಐಆರ್ ಮಾಡಿಲ್ಲ, ಎರಡು ದಿನ ಸುಮ್ಮನೇ ಇದ್ದರು. ಜಗದೀಶ್ ಅವರು ಹೇಳುದ್ರು ಕಂಪ್ಲೆಂಟ್ ಕೊಡಿ ಅಂತ ಆದ್ರೂ ಕೊಡಲಿಲ್ಲ. ಅವರ ಮಾತು ಅವರು ಕೇಳಬೇಕಿತು ಅನಿಸುತ್ತೆ.
ಅದು ಆದ ಮೇಲೆ ತುಂಬಾ ಅಬ್ಯೂಸಿವ್ ಆಗಿ ಚಿಟಿಕೆ ಎಲ್ಲಾ ಹೊಡೆದುಕೊಂಡು, ಗೌರವ ಇಲ್ಲದೆ, ವಿಗ್ಗು ಅದೂ, ಇದೂ ಅಂದ್ಕೊಂಡು ಇದೆಲ್ಲ ಅವಶ್ಯಕತೆ ಇರಲಿಲ್ಲ.
ಎಲ್ಲಿರಿಗೂ ಆತ್ಮ ಗೌರವ ಅನ್ನೋದ್ ಇರುತ್ತೆ. ಯಾರೋ ಒಬ್ಬರು ಡೌನ್ ಆದ ತಕ್ಷಣ ಆಳಿಗೊಂದು ಕಲ್ಲು ಎಂಬಂತೆ ಹಾಕಬಾರದು. ಈ ಘಟನೆಯಿಂದ ಸುದೀಪ್ ಸರ್‌ಗೆ, ಶಿವಣ್ಣನಿಗೆ, ವಿಜಯ್ ಅವರಿಗೆ, ಧನಂಜಯ್ ಅವರಿಗೆ, ನಮ್ಮ ಚಿಕ್ಕಪ್ಪನಿಗೆ, ಅನಂತ್ ಸರ್‌ಗೆ ಬೇಜಾರ್ ಆಗಿಲ್ವಾ..? ಎಲ್ಲರಿಗೂ ಬೇಜಾರ್ ಆಗಿರುತ್ತೆ.
ನಮ್ಮ ಹಿರಿಯ ನಟರು ನಮಗೆ ಈ ರೀತಿಯ ವರ್ತನೆ ಕಲಿಸಿಲ್ಲ. ಈ ಕುರಿತಂತೆ ಎಲ್ಲಾ ಕಲಾವಿದರು ಮಾತಾಡಬೇಕು. ಇದು ಮಾತನಾಡಬೇಕಾದ ಸಮಯ. ಇದೇ ಮಾತು ಸುದೀಪ್ ಸರ್‌ಗೆ, ಪುನೀತ್ ಸರ್‌ಗೆ ಮಾತನಾಡಿದರೆ ಎಲ್ರೂ ಮಾತಾಡುತ್ತಾ ಇರಲಿಲ್ಲವೇ..? ಇದು ಎಲ್ರೂ ಮಾತನಾಡಲೇ ಬೇಕಾದ ಸಮಯ, ಇಲ್ಲವಾದರೆ ಈ ರೀತಿ ಎಲ್ಲರೂ ಮಾತನಾಡಲು ಶುರು ಮಾಡ್ತಾರೆ.
ಬಾಸ್ ನಿಮಗೆ ಯಾರು ಬೆದರಿಕೆ ಹಾಕಿದ್ದಾರೋ ಅವರ ಮೇಲೆ ನೀವು ಕ್ರಮಕೈಗೊಳ್ಳಬೇಕು. ಅದು ಬಿಟ್ಟು ಉಪವಾಸ ಮಾಡ್ತಿನಿ, ಬಂದ್ ಸ್ಟೇಟ್ಮೆಂಟ್ ಕೊಡಿ ಎಂದು ಹೇಳುವುದು ಒಳ್ಳೆ ಬೆಳವಣಿಗೆಯಲ್ಲ ಅನಿಸುತ್ತೆ. ಏನ್ ಪ್ರೂ ಮಾಡಲು ಪ್ರಯತ್ನ ಮಾಡ್ತಾ ಇದ್ದೀರಿ ಗೊತ್ತಾಗ್ತಾ ಇಲ್ಲ.
ಇದರ ಬಗ್ಗೆ ಅವರಿಗೆ ಗೊತ್ತೇ ಇಲ್ಲ ಅಂತ ಪ್ರೂ ಆದರೇ ಏನು..? ಅವರೇನಾದ್ರೂ ಹೋಗಿ ಬೆದರಿಕೆ ಹಾಕಿ ಅಂತ ಕಳಿಸಿದ್ರಾ..? ನನಗೆ ತಿಳಿದಂತೆ ದರ್ಶನ್ ಸರ್ ಮಾಡಲು ಸಾಧ್ಯವೇ ಇಲ್ಲ. ಪ್ರಾಮಾಣಿಕ, ವಾಸ್ತವ ಅನ್ನೋದ್ ಇದೇ ಕಾರಣಕ್ಕೆ ನಾ ಮಾತಾಡಬೇಕಾದ ಅನಿವಾರ್ಯತೆ ಇದೆ.
ಪ್ರಥಮ್ ಸರ್ಗೆ ನಾ ಮನವಿ ಮಾಡೋದ್ ಒಂದೇ ತಾಳ್ಮೆ ತಗೋಳಿ. ಚಿಟಿಕೆ ಎಲ್ಲ ಹೊಡೆಯೋದು ಸರಿ ಕಾಣಲಿಲ್ಲ. ಅವರಿಗೂ ಕುಟುಂಬ ಇರುತ್ತೆ. ಅವರಿಗೂ ಮಗ ಇದ್ದಾನೆ ಎಂಬುದು ಅರಿವಿರಲಿ.
ಈ ವಿಚಾರವಾಗಿ ಏಕೆ ಬೇರೆ ನಟರು ಮಾತಾಡುತ್ತಿಲ್ಲ ಎಂಬುದು ಆಶ್ಚರ್ಯಕರ ವಿಚಾರ. ನಾ ಇದರಿಂದ ಯಾರ ಮೆಚ್ಚುಗೆ ಪಡೆಯುವ ಉದ್ದೇಶ ಇಲ್ಲ. ಆದರೆ ಪ್ರಥಮ್ ಅವರು ಮಾಡಿದ್ದು ತಪ್ಪು, ಅವರ ಮೂವಿಗೆ ಒಳ್ಳೆದಾಗಲಿ, ದೂರು ನೀಡಿದ್ದೀರಿ. ಆದರೆ ಪೋಲಿಸರಿಗೆ ಕಿಟಿಕಿಯಿಂದ ಬೈಯ್ಯುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ.