ನವದೆಹಲಿ: ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (Gas cylinder) ಬೆಲೆಯನ್ನು 33.50 ರೂ.ಗಳಷ್ಟು ತಗ್ಗಿಸಿದ್ದು, ಈ ಹೊಸ ಬೆಲೆ ಇಂದಿನಿಂದಲೇ ಜಾರಿಯಾಗಿದೆ.
ಇಂಡಿಯನ್ ಆಯಿಲ್‌ನ ವೆಬ್‌ಸೈಟ್ ಪ್ರಕಾರ, ಮಹಾನಗರಗಳಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ (Commercial LPG Gas) ಬೆಲೆಯನ್ನು 33.5 ರೂ.ಗಳಿಂದ 34.5 ರೂ.ಗಳಿಗೆ ಇಳಿಸಲಾಗಿದೆ.
ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,738 ರೂ. ಇದೆ.
ಆದರೆ ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಬೆಲೆ ಬದಲಾಗದೆ ಉಳಿದಿದೆ. ಏಪ್ರಿಲ್ 8 ರಂದು 50 ರೂ. ಹೆಚ್ಚಳವಾದ ನಂತರ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಬದಲಾಗದೆ ಉಳಿದಿವೆ.
14.2 ಕೆಜಿ ಸಿಲಿಂಡರ್‌ನ ಎಲ್‌ಪಿಜಿ ಬೆಲೆಗಳು ದೆಹಲಿಯಲ್ಲಿ 853 ರೂ., ಕೋಲ್ಕತ್ತಾದಲ್ಲಿ 879 ರೂ. ಮುಂಬೈನಲ್ಲಿ 852.50 ರೂ. ಮತ್ತು ಚೆನ್ನೈನಲ್ಲಿ 868.50 ರೂ. ಇದೆ.