ನವದೆಹಲಿ: ಆಗಸ್ಟ್ 1ರಿಂದ ಜಾರಿಯಾಗುವಂತೆ ಭಾರತದ ಮೇಲೆ ಶೇ.25ರಷ್ಟು ಸುಂಕದ ಬರೆ ಹಾಕಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಿತ್ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಬುಧವಾರ ಪಾಕಿಸ್ತಾನದ ಜತೆ ತೈಲ ಒಪ್ಪಂದ ಮಾಡಿಕೊಂಡಿದ್ದಾರೆ.
ಮತ್ತೊಂದೆಡೆ ಭಾರತದ ಆರು ತೈಲ ಕಂಪನಿಗಳಿಗೆ ನಿರ್ಬಂಧ ವಿಧಿಸಿದೆ. ಆ ಮೂಲಕ ಭಾರತಕ್ಕೆ ಕಳೆದ ಎರಡು ದಿನಗಳಲ್ಲಿ ಮೂರು ಶಾಕ್ ನೀಡಿದ್ದಾರೆ. ಅಮೆರಿಕದ ಈ ನಡೆ ಭಾರತದ ಆರ್ಥಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ರಷ್ಯಾ ಜತೆ ಸ್ನೇಹ ಮುಂದುವರಿಸಿರುವುದಕ್ಕೆ ಭಾರತದ ವಿರುದ್ಧ ಒಂದಾದರೊಂದು ಮೇಲೆ ದಂಡ ಪ್ರಯೋಗಿಸುತ್ತಿರುವ ಟ್ರಂಪ್, ಇದೀಗ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ. ಅದರಲ್ಲೂ ಮುಂದೊಂದು ದಿನ ಭಾರತವೇ ಪಾಕಿಸ್ತಾನದಿಂದ ತೈಲವನ್ನು ಖರೀದಿಸಲಿದೆ ಎಂದು ಹೇಳುವ ಮೂಲಕ ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಮೋದಿ ಅವರು ಎಷ್ಟೇ ಚುನಾವಣೆ ಪ್ರಚಾರ ಮಾಡಿ, ಮೈ ಪ್ರೆಂಡ್, ಪ್ರೆಂಡ್ ಆಫ್ ಇಂಡಿಯಾ ಎಂದರೂ ಅಮೆರಿಕ ಎಂದಿಗೂ ಭಾರತಕ್ಕೆ ನಂಬಿಕಾರ್ಹ ದೇಶವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ.
ಪಾಕ್ ಜತೆ ತೈಲ ಪಾಲುದಾರಿಕೆ ಟ್ರಂಪ್ ಘೋಷಣೆ
ದಕ್ಷಿಣ ಏಷ್ಯಾ ರಾಷ್ಟ್ರದ ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜತೆಗೂಡಿ ಕೆಲಸ ಮಾಡಲು ಅಮೆರಿಕ ಪಾಕ್‌ನೊಂದಿಗೆ ಒಪ್ಪಂದ ಮಾಡಿ ಕೊಂಡಿದೆ ಎಂದು ಟ್ರಂಪ್ ಬುಧವಾರ ಹೇಳಿದ್ದಾರೆ.
ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಲಿವೆ. ಈ ಪಾಲುದಾರಿಕೆ ಯನ್ನು ಮುನ್ನಡೆಸುವ ತೈಲ ಕಂಪನಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಭಾರತದ 6 ಕಂಪನಿ ಮೇಲೆ ನಿರ್ಬಂಧ: ವಿಶ್ವದಾದ್ಯಂತ 20 ಕಂಪನಿಗಳನ್ನು ಗುರಿ ಯಾಗಿಸಿಕೊಂಡು ವ್ಯಾಪಕ ಕ್ರಮ ಕೈಗೊಳ್ಳುವ ಭಾಗ ವಾಗಿ ಇರಾನ್ ಜತೆಗೆ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವ ಆರೋಪದಡಿ ಭಾರತದ ಆರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಭಾರತದ ಕಂಪನಿಗಳು ಇರಾನ್ ಮೇಲೆ ಅಮೆರಿಕ ವಿಧಿಸಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ಪೆಟ್ರೋಲಿಯಂ ಉತ್ಪನ್ನಗಳ ಖರೀದಿ ಮತ್ತು ಮಾರುಕಟ್ಟೆ ವಹಿವಾಟು ನಡೆಸುತ್ತಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಆರೋಪಿಸಿದೆ.
ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್, ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್, ರಾಮಿಕ್ಲಾಲ್ ಎಸ್ ಗೊಸಾಲಿಯಾ, ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್, ಕಾಂಚನ್ ಪಾಲಿಮರ್ಸ್ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.
ಕುಸಿದ ರುಪಾಯಿ ಮೌಲ್ಯ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ರಫ್ತುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವ ಘೋಷಣೆ ಮಾಡಿದ್ದ ಪರಿಣಾಮವಾಗಿ ಗುರುವಾರ ರುಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಗುರುವಾರ ಬೆಳಗ್ಗೆ 11:30ರ ವೇಳೆಗೆ 87.56ಕ್ಕೆ ಇಳಿದ ಬಳಿಕ, ಪ್ರತಿ ಡಾಲರ್‌ಗೆ ರು. ಮೌಲ್ಯ 87.74ಕ್ಕೆ ಇಳಿದು, ಶೇ.0.2ರಷ್ಟು ಕುಸಿತ ಫೆಬ್ರವರಿಯಲ್ಲಿ ದಾಖಲಾಗಿದ್ದ 87.95ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದ್ದ ಕರೆನ್ಸಿ, ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ಶೇ.2 ರಷ್ಟು ಕುಸಿದಿದೆ.
ರುಪಾಯಿ ಮೌಲ್ಯವು ದಾಖ ಲೆಯ ಕನಿಷ್ಠ ಮಟ್ಟಕ್ಕೆ ಇಳಿಯುವುದನ್ನು ತಡೆಯಲು, ಕೇಂದ್ರ ಬ್ಯಾಂಕ್ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ.
ಪಾಕಿಸ್ತಾನದೊಂದಿಗೆ ಒಪ್ಪಂದ
ಪಾಕಿಸ್ತಾನ ಒಂದು ದಿನ ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು ಎಂದು ಡೊನಾಲ್ ಟ್ರಂಪ್ ಹೇಳಿದ್ದಾರೆ. ಟೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಾವು ಪಾಕಿಸ್ತಾನ ದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ, ಆ ಮೂಲಕ ಪಾಕಿಸ್ತಾನ ಮತ್ತು ಅಮೆರಿಕ ತಮ್ಮ ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸುವಲ್ಲಿ ಒಟ್ಟಾಗಿ ಕೆಲಸ ಮಾಡುತ್ತವೆ.
ಈ ಪಾಲು ದಾರಿಕೆಯನ್ನು ಮುನ್ನಡೆಸುವ ತೈಲ ಕಂಪನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಯಾರಿಗೆ ಗೊತ್ತು, ಬಹುಶಃ ಅವರು ಒಂದು ದಿನ ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು ಎಂದು ಟ್ರಂಪ್ ಬರೆದುಕೊಂಡಿದ್ದಾರೆ.