ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಮನೆ ಕೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಹೊರಡಿಸಿದೆ.
ಶುಕ್ರವಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿಯಾಗಿದ್ದಾನೆಂದು ನ್ಯಾಯಾಧೀಶರು ಘೋಷಿಸಿದ್ದಾರೆ. ಅಲ್ಲದೆ ಶನಿವಾರ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಿತು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿ ಮನೆಗೆಲಸದ ಮಹಿಳೆಯ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ನಡೆಸಿತ್ತು.
ಮೈಸೂರಿನ ಕೆ ಆರ್ ನಗರದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್ 376(2)(2), 376(2)(5), 506, 354-2, 354(2), 354(2), 354(2) , 662 8 ದಾಖಲಿಸಲಾಗಿತ್ತು.
ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಗಳ ಪೆನ್ ಡ್ರೈವ್ ವೈರಲ್ ಆದ ಬಳಿಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದರು. ಬಳಿಕ ವಿಶ್ವಾದ್ಯಂತ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.
2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ, ಕೆ.ಆರ್.ನಗರದ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರೇಪ್ ಕೇಸ್ ದಾಖಲಿಸಿಕೊಂಡಿದ್ದರು. ಕೇವಲ 7 ತಿಂಗಳಿನಲ್ಲಿ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ತೀರ್ಪು ನೀಡಿ, ಜೀವಾವಧಿ ಶಿಕ್ಷೆ, 10 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಇನ್ನೂ ತೀವ್ರ ಕುತೂಹಲ ಕೆರಳಿಸಿದ್ದ ಶಿಕ್ಷೆ ಪ್ರಮಾಣದ ಕುರಿತು ಖಾಸಗಿ ಚಾನೆಲ್ ಒಂದರ ಆಂಕರ್ ನಿರೂಪಿಸಿರುವುದು (ಕಿರಿಚಿರುವುದು) ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ.
ಅಣ್ಣಂಗೆ ಯಾರಾದ್ರೂ ನೀರ್ ಕುಡಿಸ್ರೋ 😂#PrajwalRevanna pic.twitter.com/X51LhrZJKo
— King Kariya (@KingKariyaa) August 2, 2025
ಹೌದು ಪ್ರಜ್ವಲ್ ರೇವಣ್ಣ ಪ್ರಕರಣ ತೀರ್ಪು ಮತ್ತು ಶಿಕ್ಷೆ ಪ್ರಮಾಣದ ಕುರಿತು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕುತೂಹಲ ಕೆರಳಿಸಿತ್ತು. ಅದನ್ನು ವರದಿ ಮಾಡಲು ಇಡೀ ಮಾಧ್ಯಮಗಳು ಕಾದು ನಿಂತಿದ್ದವು. ಈ ವೇಳೆ ಖಾಸಗಿ ನ್ಯೂಸ್ ಚಾನಲ್ TV5 ಕನ್ನಡದ ಆಂಕರ್ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆ ಪ್ರಮಾಣ ಘೋಷಿಸುತ್ತಿದ್ದಂತೆ, ದೊಡ್ಡ ದನಿಯಲ್ಲಿ ತೀರ್ಪಿನ ಕುರಿತು ಹೇಳಿದ್ದಾರೆ.
ಇದು ನೆಟ್ಟಿಗರಿಂದ ಟ್ರೋಲ್ಗೆ ಒಳಗಾಗಿದ್ದು, ಅಣ್ಣನಿಗೆ ಯಾರಾದ್ರೂ ನೀರು ಕುಡಿಸಿರೋ, ನಿಧಾನ ಗುರು, ಜೀವ- ಗೀವ ಹೋದ್ಗೀದಾತು ಎಂದು ಲೇವಡಿ ಮಾಡಿದ್ದಾರೆ.
ನಿಧಾನ ಗುರು ,, ಜೀವ-ಗೀವ ಹೋದ್ಗೀದಾತು.😂pic.twitter.com/UuMKqZh9m0
— 🇮🇳 Madhukumar.V.P🇮🇳 (@MadhukumarVP1) August 2, 2025
ಇನ್ನೂ ಕೆಲವರು ಇದೇ ಪ್ರಕರಣದ ವರದಿಯನ್ನು ದೂರದರ್ಶನ ಚಂದನ ಆಂಕರ್ ನಿರೂಪಿಸಿರುವುದು ಹಾಗೂ Tv5 ಕನ್ನಡ ಖಾಸಗಿ ಚಾನಲ್ ಆಂಕರ್ ನಿರುಪಿಸಿರುವ ವಿಡಿಯೋ ಎಡಿಟ್ ಮಾಡಿ, ವೆತ್ಯಾಸ ಗಮನಿಸಿ, ಸರ್ಕಾರಿ ಉದ್ಯೋಗ Vs ಖಾಸಗಿ ಉದ್ಯೋಗ ಎಂದು ಕಿಚಾಯಿಸಿದ್ದಾರೆ.