ಗೌರಿಬಿದನೂರು: ಬೆಂಗಳೂರಿನಲ್ಲಿ ಮಾರಾಟ ಮಾಡಲು ತಾಲ್ಲೂಕಿನ ಅಲೀಪುರದಲ್ಲಿ (Alipur) ಅಕ್ರಮವಾಗಿ ಸಂಗ್ರಹಿಸಿದ್ದ 2.500 ಕೆ.ಜಿ ದನದ ಮಾಂಸವನ್ನು (Beef) ಮಂಚೇನಹಳ್ಳಿ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ ರೂ.4.80 ಲಕ್ಷ ಎಂದು ಅಂದಾಜಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಭಾನುವಾರ ಬೆಳಗಿನ ಜಾವ ದಾಳಿ ಅಲೀಪುರದ ಬಾಕ್ರಿ ಮೊಹಲ್ಲಾ ಗಲ್ಲಿಯ ಎರಡು ಶೆಡ್‌ಗಳ ಮೇಲೆ ದಾಳಿ ನಡೆಸಿದರು.
ಪೊಲೀಸರನ್ನು ಕಂಡ ತಕ್ಷಣವೇ ಶೆಡ್ ಮಾಲೀಕರು ಮತ್ತು ಕೆಲಸಗಾರರು ಪರಾರಿ ಆದರು. ಅಲ್ಲಿದ್ದ 25 ದನಗಳ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡರು.
ಶೆಡ್ ಮಾಲೀಕರಾದ ಅಬ್ಬಾಸ್, ಖಾಲು, ಸೈಯದ್ ಸಕ್ಲೈ ನ್ ಮತ್ತು ಲಾಲು ವಿರುದ್ಧ ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಈ ಕುರಿತಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.