ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬದ (Varamahalakshmi festival) ಅಂಗವಾಗಿ ಬೆಲೆ ಏರಿಕೆ ಮಧ್ಯಯೂ ನಗರದ ಎಪಿಎಂಸಿ, ಮಾರುಕಟ್ಟೆ ಸೇರಿದಂತೆ ತಾಲೂಕಿನ ಹಲವು ಮಾರುಕಟ್ಟೆಗಳಲ್ಲಿ ಗುರುವಾರ ಖರೀದಿಯ ಭರಾಟೆ ಜೋರಾಗಿತ್ತು.
ಹೂ, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡರೂ ಖರೀದಿಯಲ್ಲಿ ಕೊರತೆ ಇರಲಿಲ್ಲ. ಹಬ್ಬದ ಅಂಗವಾಗಿ ಖರೀದಿಗೆ ಸಾರ್ವಜನಿಕರು ಅಂಗಡಿ, ಮುಗಟ್ಟುಗಳಿಗೆ ಮುಗಿಬಿದ್ದಿದರು.
ಕಳೆದ ವಾರಕ್ಕೆ ಹೋಲಿಸಿದರೆ ಹೂ, ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿರುವುದು ಗ್ರಾಹಕರ ಕೈ ಸುಡುವಂತೆ ಮಾಡಿದರು. ಹಬ್ಬಕ್ಕೆ ಬೇಕಾದ ಬಾಳೆದಿಂಡು, ಮಾವಿನ ತೋರಣ, ತೆಂಗು, ರೆಡಿಮೇಡ್ ಹೂಗಳು, ಉಡಿ ತುಂಬುವ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳ ಖರೀದಿಸಿದರು.