ದೊಡ್ಡಬಳ್ಳಾಪುರ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಬಿರುಸಿನ ಮಳೆಯಾಗುವುದರಿಂದ (Rain) ಹವಾಮಾನ ಇಲಾಖೆ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದ್ದು, 17 ಜಿಲ್ಲೆಗಳಲ್ಲಿ ಅಬ್ಬರದ ಮಳೆ ಸುರಿಯಲಿದೆ. ರಾಜ್ಯದ ಒಳನಾಡು ಭಾಗದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಜೋರು ಮಳೆ ಆಗಲಿದೆ.
ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಗರಿಷ್ಠ 115 ಮಿ.ಮೀ ಮಳೆ ನಿರೀಕ್ಷೆ ಇರುವುದರಿಂದ ಎಲ್ಲ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಆಗಸ್ಟ್ 12ರಿಂದ ಮಳೆ ಮತ್ತೆ ಅಬ್ಬರ ಇಳಿಮುಖ ವಾಗಲಿದ್ದು, ಆಗಸ್ಟ್ 15ರಿಂದ ಮೂರು ದಿನ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳು ಮತ್ತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಬಹುದು ಎಂದು ಹವಾಮಾನ ತಜ್ಞರ ನಿರೀಕ್ಷೆಯಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶನಿವಾರ ಮತ್ತು ಭಾನುವಾರ ಬಿದ್ದ ಮಳೆಯ ಮಾಹಿತಿ(ಮಿ.ಮೀಗಳಲ್ಲಿ)
ಕಸಬಾ ಹೋಬಳಿ; 24.9 ಶನಿವಾರ; ಭಾನುವಾರ 1.8.,
ದೊಡ್ಡಬೆಳವಂಗಲ ಹೋಬಳಿ; 14.3 ಶನಿವಾರ; ಭಾನುವಾರ 8.7., ಮಧುರೆ ಹೋಬಳಿ; 26.3 ಶನಿವಾರ; ಭಾನುವಾರ 2.5.,
ಸಾಸಲು ಹೋಬಳಿ; 35.8 ಶನಿವಾರ; ಭಾನುವಾರ 26.2., ತೂಬಗೆರೆ ಹೋಬಳಿ; 44.5 ಶನಿವಾರ; ಭಾನುವಾರ 5.6. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)