ನವದೆಹಲಿ: ಮತ ಕಳವು (Vote chori) ಕುರಿತಂತೆ ಚುನಾವಣೆ ಆಯೋಗದ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಇಂದು ದೂರು ನೀಡಲು ಕೇಂದ್ರ ಚುನಾವಣೆ ಆಯೋಗದ ಕಚೇರಿಗೆ ಪಾದಯಾತ್ರೆ ಮೂಲಕ ತೆರಳುವಾಗ ಪೊಲೀಸರು ಬಂಧಿಸಿದ್ದಾರೆ.
ಚುನಾವಣಾ ಆಯೋಗವನ್ನು ಭೇಟಿ ಮಾಡಲು ಹೊರಟಿದ್ದಾಗ, ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ವಾದ್ರಾ, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಸೇರಿದಂತೆ ಹಿರಿಯ ವಿರೋಧ ಪಕ್ಷದ ಸಂಸದರನ್ನು ದೆಹಲಿ ಪೊಲೀಸರು ಸೋಮವಾರ ಬೆಳಿಗ್ಗೆ ಬಂಧಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ಮತ ಕಳ್ಳತನದ ಸತ್ಯ ಈಗ ದೇಶದ ಮುಂದೆ ಇದೆ.
आज जब हम चुनाव आयोग से मिलने जा रहे थे, INDIA गठबंधन के सभी सांसदों को रोका गया और हिरासत में ले लिया गया।
— Rahul Gandhi (@RahulGandhi) August 11, 2025
वोट चोरी की सच्चाई अब देश के सामने है।
यह लड़ाई राजनीतिक नहीं – यह लोकतंत्र, संविधान और ‘एक व्यक्ति, एक वोट’ के अधिकार की रक्षा की लड़ाई है।
एकजुट विपक्ष और देश का हर… pic.twitter.com/SutmUirCP8
ಈ ಹೋರಾಟ ರಾಜಕೀಯವಲ್ಲ, ಇದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ‘ಒಬ್ಬ ವ್ಯಕ್ತಿ, ಒಂದು ಮತ’ದ ಹಕ್ಕನ್ನು ರಕ್ಷಿಸುವ ಹೋರಾಟವಾಗಿದೆ.
ಶುದ್ಧ ಮತದಾರರ ಪಟ್ಟಿ ನೀಡುವವರೆಗೆ ನಾವು ಹೋರಾಟ ನಡೆಸುತ್ತೇವೆ ಎಂದರು.