Astrology: ಜ.27. ದಿನ ಭವಿಷ್ಯ: ಈ ರಾಶಿಯವರಿಂದು ವಾಹನ ಚಾಲನೆಯ ವೇಳೆ ನಿಧಾನವಾಗಿ ಚಲಿಸಿ

Astrology: Likely to be a memorable day

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷದ ತ್ರಯೋದಶಿ ಜನವರಿ.27.2025 ವಿಶೇಷವಾಗಿ ಬೆಳಗ್ಗೆ ಸೂರ್ಯನನ್ನು ಸ್ಮರಣೆ ಮಾಡಿ ಕೆಳಗಿನ ಶ್ಲೋಕವನ್ನು ನಿಧಾನವಾಗಿ ಅರ್ಥ ಸಹಿತ ಅಭ್ಯಾಸ ಮಾಡಿ ಅತ್ಯಂತ ಶುಭವಾಗುತ್ತದೆ.. Astrology

ಶುಭಾಶುಭಪ್ರವಿಚಯಕರ್ಮಸಾಕ್ಷಿಣೇ
ಸಹಸ್ರ ಸಂದೀಧಿತಯೇ ನಮೋ ನಮಃ |
ಪ್ರಶಸ್ತಸಪ್ತಾಶ್ವಯುತಾಂತಪಕ್ಷಿಣೇ
ಧ್ರುವೈಕರಶ್ಮಿಗ್ರಥಿತಾಯ ತೇ ನಮಃ ॥
(ಸಾಂಬಪುರಾಣ)

ದೇವದೇವನಾದ ಸೂರ್ಯನೆ, ಶುಭಾಶುಭವಿಭಾಗರೂಪವಾದ ಪುಣ್ಯಪಾಪ ಕರ್ಮಗಳಿಗೆ ಸಾಕ್ಷಿಯಾಗಿರುವವನೂ, ಸಹಸ್ರಕಿರಣಗಳುಳ್ಳವನೂ ಆದ ನಿನಗೆ ನಮಸ್ಕಾರ.

ಶ್ರೇಷ್ಠವಾದ ಏಳು ಕುದುರೆಗಳಿಂದ ಕೂಡಿದವನೂ, ಎಲ್ಲಾ ಪ್ರಾಣಿಗಳ ಅಂತಃಕರಣದಲ್ಲಿಯೂ ಪಕ್ಷಿಯಂತೆ ಅಡಗಿರುವವನೂ ಮತ್ತೂ ಶಾಶ್ವತವಾದ ಕಿರಣಗಳಿಂದ ಕೂಡಿದವನೂ ಆದ ನಿನಗೆ ನಮಸ್ಕಾರ.

ಸಂಜೆ 5:00ಯಿಂದ 8 ಗಂಟೆಯವರೆಗೆ ಪ್ರದೋಷಕಾಲದಲ್ಲಿ ಶಿವನ ಪೂಜೆಯನ್ನು ಮಾಡಿದರೆ ಸಕಲ ಸೌಭಾಗ್ಯಗಳು ಉಂಟಾಗುತ್ತವೆ.

ಮೇಷ ರಾಶಿ: ಅಸಾಮಾನ್ಯ ಬೆಳವಣಿಗೆ, ಎಲ್ಲರಿಗೂ ಸಹ ಭಗವಂತನ ಅನುಗ್ರಹ, ಜೊತೆಗೆ ಧನಾಗಮನ ವಿದ್ಯೆಯಲ್ಲಿ ಅನುಕೂಲ, ಅಧಿಕ ಸಾರ್ಥಕದ ಖುಷಿ, ಚಿಂತೆಯಿಂದ ದೂರ, ಶುಭ ಫಲಗಳು ಉಂಟಾಗುತ್ತವೆ. (ಪರಿಹಾರಕ್ಕಾಗಿ ಕೃಷ್ಣನ ನಾಮಸ್ಮರಣೆಯನ್ನು ಮಾಡಿ)

ವೃಷಭ ರಾಶಿ: ಚಿಂತೆಯಿಂದ ಸ್ವಲ್ಪ ನಿವೃತ್ತಿ, ಮನಸ್ಸಿನ ಕಿರಿಕಿರಿ, ದೂರಾಸೆಯಿಂದ ಸಮಸ್ಯೆ, ಅಧಿಕ ತಿರುಗಾಟ, ವಾಹನ ಚಾಲನೆಯ ವೇಳೆ ನಿಧಾನವಾಗಿ ಚಲಿಸಿ, ಚಿಕ್ಕಪುಟ್ಟ ಆಸೆಗಳಿಗೆ ಜಾಸ್ತಿ ಕಿವಿಗೊಡಬೇಡಿ. (ಪರಿಹಾರಕ್ಕಾಗಿ ಶಿವನ ನಾಮಸ್ಮರಣೆಯನ್ನು ಮಾಡಿ)

ಮಿಥುನ ರಾಶಿ: ಹಣದ ಅಪವ್ಯಯ ಮಾಡಬೇಡಿ, ಚಿಂತೆಯಿಂದ ಸ್ವಲ್ಪ ವಿರಮಿಸಿ ಹುಷಾರಾಗಿ, ಧನವನ್ನು ಉಳಿಸಿಕೊಳ್ಳಿ, ಭಗವಂತನ ಮೇಲೆ ಕೂರಿಸಿಕೊಳ್ಳುವುದು ಕಮ್ಮಿ ಮಾಡಿ, ಎಲ್ಲವೂ ನಮ್ಮ ಕೆಲಸ ಕಾರ್ಯಗಳನ್ನು ಅವಲಂಬಿಸಿ, ಅನಿಷ್ಟಗಳು ಬರುತ್ತವೆ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಿ. (ಪರಿಹಾರಕ್ಕಾಗಿ ನರಸಿಂಹನನ್ನು ಪ್ರಾರ್ಥನೆ ಮಾಡಿ)

ಕಟಕ ರಾಶಿ: ಒಳ್ಳೆಯದಾಗಿದೆ ಚಿಂತೆ ಬೇಡ, ಈಗ ಆಗಿರುವುದು ನಿಮ್ಮ ಮುಂದಿನ ಸುಖಕ್ಕಾಗಿ. ಆದರೆ ಸ್ವಲ್ಪ ಮನಸ್ಸಿಗೆ ದ್ವಂದ್ವ ಅವಸ್ಥೆ ನಿಧಾನವಾಗಿ ಹೊರ ಬರಬಹುದು, ಸಮಸ್ಯೆ ಇಲ್ಲ. ವಿದ್ಯಾರ್ಥಿಗಳಿಗೆ ಅನುಕೂಲ, ಆಯಸ್ಸು ವೃದ್ಧಿ ಭಯ ನಿವಾರಣೆ. (ಪರಿಹಾರಕ್ಕಾಗಿ ಸೂರ್ಯನಾರಾಯಣನನ್ನು ಸ್ಮರಣೆ ಮಾಡಿ)

ಸಿಂಹ ರಾಶಿ: ಇನ್ನೊಬ್ಬರ ಮಾತುಗಳನ್ನು ಕೇಳುವಾಗ ಎಚ್ಚರಿಕೆ ಇರಲಿ. ನಿಮ್ಮ ಸ್ವಂತಿಕೆ ಸ್ವಲ್ಪ ಕೆಲಸ ಮಾಡಿ, ಬುದ್ಧಿಯನ್ನು ಚುರುಕು ಮಾಡಿಕೊಳ್ಳಬೇಕು. ಅತಿಯಾಗಿ ವಿಶ್ವಾಸ ಇಡಬೇಡಿ ಇದರಿಂದ ತೊಂದರೆಯಾಗುತ್ತದೆ. ಜೀವನವನ್ನು ಸಾರ್ಥಕ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ಮಹಾಗಣಪತಿಯ ದ್ವಾದಶ ನಾಮ ಸ್ತೋತ್ರವನ್ನು ಪಾರಾಯಣ ಮಾಡಿ)

ಕನ್ಯಾ ರಾಶಿ: ಜಾಗರೂಕತೆಯಿಂದ ಧೈರ್ಯವಾಗಿ ಕೆಲಸಗಳನ್ನು ಶುರು ಮಾಡಿ, ಹಿರಿಯರ ಮಾತನ್ನು ಅನುಸರಿಸಿ. ಎಲ್ಲಾ ವಿಷಯದಲ್ಲೂ ತನ್ನದೇ ಆದಂತ ಜಾಗರೂಕತೆ ಬೇಕಾಗುತ್ತದೆ.. ಎಚ್ಚರಿಕೆ ಮತ್ತು ತೀವ್ರವಾದ ಅನುಸರಣೆ ಮಾಡಬೇಕು. (ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ)

ತುಲಾ ರಾಶಿ: ಸ್ವಲ್ಪಮಟ್ಟಿನ ಅನುಕೂಲ, ಗುರುಗಳ ಸಲಹೆ, ಬಟ್ಟೆಗಳ ಮೇಲೆ ಸ್ವಲ್ಪ ನಿರಾಸಕ್ತಿ.. ಹೊಸ ರೀತಿಯ ವ್ಯವಸ್ಥೆ, ಎಲ್ಲದರಲ್ಲೂ ಅನುಕೂಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಲಾಭ ಪ್ರಾಪ್ತಿಯಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಷ್ಟಕವನ್ನು 18 ಬಾರಿ ಓದಿ)

ವೃಶ್ಚಿಕ ರಾಶಿ: ಅತಿಯಾಗಿ ಯೋಚಿಸಬೇಡಿ, ಅತ್ಯಂತ ಶುಭವಾಗುತ್ತದೆ. ಚಿಂತೆಯಿಂದ ದೂರವಿರಿ ಚಿಂತೆ ಆರೋಗ್ಯವನ್ನು ಕೆಡಿಸುತ್ತದೆ.. ಅನಾರೋಗ್ಯ ಬಾರದೆ ಸ್ವಲ್ಪ ತೊಂದರೆ ಎಚ್ಚರಿಕೆಯಿಂದ ಆರೋಗ್ಯವಾಗಿರಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಧನ್ವಂತ್ರಿ ಮಹಾ ವಿಷ್ಣುವಿನ ಸ್ಮರಣೆ ಮಾಡಿ)

ಧನಸ್ಸು ರಾಶಿ: ತಿರುಗಾಟದಿಂದ ಮನಸ್ಸು ಸ್ವಲ್ಪ ಬಳದಿದೆ.. ಯಾವ ಕಾರ್ಯದಲ್ಲೂ ನಿರಾಸಕ್ತಿ ಇರದೇ ಇರುವವರು ಈ ದಿನ ನಿರಾಶಕ್ತಿಯಾಗಿದೆ. ಅತಿಯಾಗಿ ಯೋಚನೆ ಮಾಡುವ ಅಗತ್ಯವಿಲ್ಲ, ಒಳ್ಳೆಯದಾಗುತ್ತದೆ ವಿದ್ಯಾರ್ಥಿಗಳಿಗೆ ಶುಭ. (ಪರಿಹಾರಕ್ಕಾಗಿ ಕೊಲ್ಹಾಪುರ ಮಹಾಲಕ್ಷ್ಮಿ ಅಮ್ಮನವರ ಪ್ರಾರ್ಥನೆ ಮಾಡಿ)

ಮಕರ ರಾಶಿ: ಅತಿಯಾಗಿ ಖುಷಿ ಆದರೆ ಸ್ವಲ್ಪ ಮನೆಯಲ್ಲಿ ವಿರಸ.. ಬದುಕು ಸ್ವಲ್ಪ ಕಷ್ಟ ನಷ್ಟಗಳೊಂದಿಗೆ ಪ್ರಾರಂಭ, ಎಚ್ಚರಿಕೆಯಿಂದ ಮುನ್ನುಗ್ಗಿ ಶುಭವಾಗುತ್ತದೆ. ಬೇರೆಯವರಿಗೆ ಖುಷಿ ಪಡಿಸುವ ನಿಮ್ಮ ಪ್ರಯತ್ನ ಫಲ ಕೊಡುವುದಿಲ್ಲ ಎಲ್ಲರಿಗೂ ಈ ದಿನ ಶುಭ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ)

ಕುಂಭ ರಾಶಿ: ಸಾಮಾನ್ಯ ಬೆಳವಣಿಗೆ ಇದ್ದಕ್ಕಿದ್ದಂತೆಯೇ ಶುಭ, ಧನಾಗಮನ, ಆನಂದ, ಉತ್ಸಾಹ, ಎಲ್ಲ ಕಾರ್ಯದಲ್ಲೂ ಇದ್ದಕ್ಕಿದ್ದಂತೆ ಶುಭವಾಗುತ್ತದೆ. ಅನಿಷ್ಟಗಳು ದೂರವಾಗುತ್ತದೆ. (ಪರಿಹಾರಕ್ಕಾಗಿ ಅಮ್ಮನವರನ್ನು ಕೆಂಪು ಹೂಗಳಿಂದ ಪೂಜೆ ಮಾಡಿ)

ಮೀನ ರಾಶಿ: ಯೋಚಿಸಿದ ನಂತರ ನಿಮಗೆ ಇನ್ನೊಬ್ಬರ ಬಗ್ಗೆ ತಿಳಿಯಲು ಪ್ರಾರಂಭವಾಗುತ್ತದೆ.. ಬಂಧು ಮಿತ್ರರಿಂದ ಸ್ವಲ್ಪ ದೂರವಾಗುತ್ತೀರಾ, ಎಚ್ಚರಿಕೆಯಿಂದ ಗಮನಿಸಿ, ಗಲಾಟೆ, ಶತ್ರುಗಳ ಭಯ, ಅಧಿಕ. (ಹನುಮಂತನ ಸ್ಮರಣೆಯನ್ನು ಮಾಡಿ ಪರಿಹಾರವಾಗುತ್ತದೆ)

ರಾಹುಕಾಲ: 7-30AM ರಿಂದ 9-00AM
ಗುಳಿಕಕಾಲ: 6-00AM ರಿಂದ 7-30 AM
ಯಮಗಂಡಕಾಲ: 1-30PMರಿಂದ 3-00PM

ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ಮೊ-9945170572

ರಾಜಕೀಯ

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸಿಲಿಂಡರ್ ಸ್ಪೋಟ.. ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮ

ಸಿಲಿಂಡರ್ ಸ್ಪೋಟ.. ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮ

ಗ್ಯಾಸ್ ಸಿಲಿಂಡರ್ (Gas Cylinder ) ಸ್ಪೋಟಗೊಂಡು ಎರಡು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ವರದಿಯಾಗಿದೆ.

[ccc_my_favorite_select_button post_id="121161"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!