ದೊಡ್ಡಬಳ್ಳಾಪುರ: ತಾಲೂಕಿನ ಉಜ್ಜನಿ ಹೊಸಹಳ್ಳಿ (Ujjani Hosahalli) ಗ್ರಾಮದಲ್ಲಿನ ಇತಿಹಾಸ ಪ್ರಸಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗಿನಿಂದಲೂ ಅಭಿಷೇಕ, ಅರ್ಚನೆ ನೆಡೆದು ಶ್ರೀಲಕ್ಷ್ಮೀನರಸಿಂಹಸ್ವಾಮಿಯನ್ನು ದೇವಾಲಯದಿಂದ ತಂದು ಪಂಚ ಕಳಸ ಊಡಿದ ರಥದಲ್ಲಿ ಪ್ರತಿಸ್ಠಾಪಿಸುತಿದ್ದಂತೆ, ಮಧ್ಯಾಹ್ನ 2.30ಕ್ಕೆ ವೇದಬ್ರಹ್ಮರ ಮಂತ್ರ ಘೋಷಗಳೊಂದಿಗೆ ರಥ ಮುಂದೆ ಸಾಗುತಿದ್ದಂತೆ, ಜಯಘೋಷ ಹಾಕುತ್ತ ಹರಕೆ ಹೊತ್ತ ಭಕ್ತರು ಭಕ್ತಿ ಭಾವದಿಂದ ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿದರು.
ರಥೋತ್ಸವದಲ್ಲಿ ಭಕ್ತರ ಜೈಕಾರ, ತಮಟೆ ವಾದ್ಯಗಳ ಸದ್ದು ಮುಗಿಲು ಮುಟ್ಟುವಂತಿತ್ತು.
ರಥವನ್ನು ಗ್ರಾಮದ ಮುಖ್ಯ ಬೀದಿಯಿಂದ ಗೊಡ್ಡರಾಯಿಕಲ್ಲಿನವರೆಗೆ ಎಳೆದು ತರಲಾಯಿತು
ಬ್ರಹ್ಮರಥೋತ್ಸವದ ಅಂಗವಾಗಿ ರಥ ಹಾಗೂ ಗರ್ಭಗುಡಿಯಲ್ಲಿನ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿವಿಧ ಸಮುದಾಯದವತಿಯಿಂದ ಬ್ರಹ್ಮರಥೊತ್ಸವದ ಬರುವ ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಾಗೂ ಪ್ರಸಾದ ವಿತರಿಸಲು ರಸ್ತೆ ಬದಿಗಳಲ್ಲಿ ಶಾಮಿಯಾನ, ಟೆಂಟ್ ಮತ್ತು ಅರವಂಟಿಕೆಗಳ ವ್ಯವಸ್ಥೆ ಮಾಡಿದ್ದರು.
ಶ್ರೀ ಅಂಬಾಭವಾನಿ ಮರಾರ ಸಂಘದಿಂದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದಂತಹ ಭಾರತೀಯ ಯೋಧರ ಜ್ಞಾಪಕಾರ್ಥವಾಗಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಮೇ.15ರಿಂದ ಮೇ.19ರವರೆಗೆ ಅಭಿಷೇಕ, ಅರ್ಚನೆ, ಮಹಾಗಣಪತಿ ಪೂಜೆ, ಅಂಕುರಾರ್ಪಣೆ, ಧ್ವಜಾರೋಹಣ, ಕಲ್ಯಾಣೋತ್ಸವ, ಧೂಳೋತ್ಸವ, ಪಲ್ಲಕಿ ಉತ್ಸವ, ಡೊಳ್ಳು ಕುಣಿತ, ಉಯ್ಯಾಲೋತ್ಸವ, ಶಯನೋತ್ಸವ, ಗ್ರಾಮೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇಂದು ಸಂಜೆ ಗುಂಡಮ್ಮ ಕಥಾ ಅಥವಾ ಸಾಸಲು ಚಿನ್ನಮ್ಮ ಕಥಾ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಹೊಸಹಳ್ಳಿ ಗ್ರಾಮದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿಯ ದೇವಾಲಯ ಪುರಾಣ ಪ್ರಸಿದ್ದಿ ದೇವಾಲಯವಾಗಿದೆ. ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಭಕ್ತಾಧಿಗಳು ತಮ್ಮ ಇಚ್ಚಾನುಸಾರ ದೇವಸ್ಥಾನದ ಅಭಿವೃದ್ದಿಗೆ ಶ್ರಮಿಸುತ್ತಾರೆ.
ರಥೋತ್ಸವದ ಮೂರು ದಿನ ಮುಂಚಿತವಾಗಿ ವಿವಿಧ ಸಮುದಾಯದ ಭಕ್ತರು ಬಂದು ರಥೋತ್ಸವಕ್ಕೆ ಬೇಕಾದ ಸಿದ್ದತೆಯಲ್ಲಿ ತೊಡಗುತ್ತಾರೆ.