ಬೆಂ.ಗ್ರಾಂ.ಜಿಲ್ಲೆ: ನನ್ನ ಭಾರತ ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ (Civil Defence Volunteer) ನೋಂದಾಯಿಸಿಕೊಳ್ಳಲು ಯುವಕರಿಗೆ ಇದು ಸಕಾಲವಾಗಿದ್ದು ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯಿಂದ (Department of Youth Affairs and Sports) ರಾಷ್ಟ್ರವ್ಯಾಪಿ ಕರೆಯನ್ನು ನೀಡಲಾಗಿದೆ.
ವಿಶೇಷವಾಗಿ ತುರ್ತು ಪರಿಸ್ಥಿತಿಗಳು ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ಯುವಕರು ದೇಶಕ್ಕೆ ಕೊಡುಗೆಯನ್ನು ನೀಡಲು ಇದು ಉತ್ತಮವಾದ ಅವಕಾಶವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಉದಯೋನ್ಮುಖ ಭದ್ರತಾ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಬಲವಾದ, ಸಮುದಾಯ ಆಧಾರಿತ ಪ್ರತಿಕ್ರಿಯೆ ಕಾರ್ಯ ವಿಧಾನವನ್ನು ಸ್ಥಾಪಿಸುವ ಕುರಿತು ನಾಗರಿಕ ರಕ್ಷಣಾ ಸ್ವಯಂ ಸೇವಕರು ವ್ಯಾಪಕ ಶ್ರೇಣಿಯ ಸೇವೆಗಳ ಮೂಲಕ ಸ್ಥಳೀಯ ಅಧಿಕಾರಿಗಳೊಂದಿಗೆ ಬೆಂಬಲಿಸುವ ಮೂಲಕ ಉತ್ತಮ ಪಾತ್ರವನ್ನು ವಹಿಸಬೇಕಾಗುತ್ತದೆ.
ಪ್ರಮುಖವಾಗಿ ನನ್ನ ಭಾರತ ಎಂಬುದು ಸಂಘಟಿತ ಪ್ರಯತ್ನದ ಭಾಗವಾಗಿದ್ದು, ನೈಸರ್ಗಿಕ ವಿಕೋಪಗಳು, ಅಪಘಾತಗಳು, ಸಾರ್ವಜನಿಕ ತುರ್ತು ಪರಿಸ್ಥಿತಿಗಳು ಮತ್ತು ಇತರ ಅನಿರೀಕ್ಷಿತ ಸಂದರ್ಭದಲ್ಲಿ ನಾಗರಿಕ ಆಡಳಿತವನ್ನು ಪೂರೈಸುವ ಉತ್ತಮ ತರಬೇತಿ ಪಡೆದು ಸ್ಪಂದಿಸುವ ಮತ್ತು ಸ್ಥಿತಿಸ್ಥಾಪಕತ್ವ ಸ್ವಯಂ ಸೇವಕ ಪಡೆಯನ್ನು ನಿರ್ಮಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.
ಜೊತೆಗೆ ರಕ್ಷಣಾ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆಗಳು, ಪ್ರಥಮ ಚಿಕಿತ್ಸೆ, ಸಂಚಾರ ನಿರ್ವಹಣೆ, ಜನಸಂದಣಿ ನಿಯಂತ್ರಣ, ಸಾರ್ವಜನಿಕ ಸುರಕ್ಷತೆ ಮತ್ತು ಪುನರ್ವಸತಿ ಕಲ್ಪಿಸುವ ಪ್ರಯತ್ನಗಳಲ್ಲಿ ಸಹಾಯ ಮಾಡುವುದು ನನ್ನ ಭಾರತ ರಾಷ್ಟೀಯ ಧ್ಯೇಯಕ್ಕೆ ಕೊಡುಗೆ ನೀಡಲು ಯುವಕರು ಬದ್ಧರಾಗಿರಬೇಕು.
ನನ್ನ ಭಾರತ ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಉತ್ಸಾಹಭರಿತ ಯುವ ನಾಗರಿಕರು ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಬಹುದು.
ಈಗಾಗಲೇ ಸೇವೆಯನ್ನು ಸಲ್ಲಿಸುತ್ತಿರುವ ಸ್ವಯಂ ಸೇವಕರೊಂದಿಗೆ ಎಲ್ಲರೂ ಕಾರ್ಯವನ್ನು ನಿರ್ವಹಿಸಬಹುದು. ಹಾಗೇ ನಿರ್ಣಾಯಕ ಸಂದರ್ಭದಲ್ಲಿ ತ್ವರಿತವಾಗಿ ಕಾರ್ಯ ನಿರ್ವಹಿಸಲು ಪ್ರಾಯೋಗಿಕ ಜೀವರಕ್ಷಕ ಕೌಶಲ್ಯಗಳ ತರಬೇತಿಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನನ್ನ ಭಾರತ ಪೋರ್ಟಲ್ https://mybharat.gov.in ಈ ಅಧಿಕೃತ ಜಾಲತಾಣದ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಹಾಗೂ ಸಹಾಯವಾಣಿ ಸಂಖ್ಯೆ:8328673178 ಗೆ ಸಂಪರ್ಕಿಸಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರದ ಯುವ ಅಧಿಕಾರಿ ಕೆ. ಶ್ರಿವಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.