2 years of state government: Congress-BJP ad war in newspapers

ರಾಜ್ಯ ಸರ್ಕಾರಕ್ಕೆ 2 ವರ್ಷ: ಪತ್ರಿಕೆಗಳಲ್ಲಿ ಕಾಂಗ್ರೆಸ್ – ಬಿಜೆಪಿ ಜಾಹೀರಾತು ವಾರ್

ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷವನ್ನು ಪೂರ್ಣಗೊಳಿಸಿದೆ.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ (Congress) ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆ ರಾಜ್ಯ ಕಾಂಗ್ರೆಸ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ.

ಇದರ ನಡುವೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ದಿನಪತ್ರಿಕೆಗಳಲ್ಲಿ ಜಾಹೀರಾತು ವಾರ್ ಕೂಡಾ ನಡೆದಿದೆ.

ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ಜಾಹೀರಾತು ನೀಡಿರುವ ಕಾಂಗ್ರೆಸ್, ಪ್ರಗತಿಯತ್ತ ಕರ್ನಾಟಕ, ಸಮರ್ಪಣೆಯ ಸಂಕಲ್ಪ ಎರಡು ವರ್ಷಗಳ ಸಾಧನೆಯ ಸಮರ್ಪಣೆ ಮತ್ತಷ್ಟು ಜನಪರ ಸೇವೆಯ ಪ್ರತಿಜ್ಞೆ, ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಎಂದು ಹೊಗಳಿಕೊಂಡಿದೆ.

ಮತ್ತೊಂದೆಡೆ ರಾಜ್ಯ ಸರ್ಕಾರ ವೈಪಲ್ಯಗಳನ್ನು ಕೆದಕಿರುವ ಬಿಜೆಪಿ, ಜಾಹೀರಾತಿನಲ್ಲಿ ದುಬಾರಿ ಜೀವನ, ಅಭಿವೃದ್ಧಿ ಶೂನ್ಯ ಇದುವೇ ಕಾಂಗ್ರೆಸ್ ಸರ್ಕಾರ. ಬೆಲೆ ಏರಿಕೆಯ ಸಾಧನೆ, 50 ಕ್ಕೂ ಹೆಚ್ಚು ವಲಯುಗಳ ಬೆಲೆ ಏರಿಕೆ ಕರ್ನಾಟಕ ಲೂಟಿಯೇ ಕಾಂಗ್ರೆಸ್‌ನ ಡ್ಯೂಟಿ, ಹೆಜ್ಜೆ ಇಡದ ಎರಡು ವರ್ಷ, ಬೆಲೆ ಏರಿಕೆ, ಭ್ರಷ್ಟತೆಯ ಕರಾಳ ಸ್ಪರ್ಷ ಎಂದು ಬರೆದಿದೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ಕಾಂಗ್ರೆಸ್‌ನ ಸಾಧನಾ ಸಮಾವೇಶದ ವಿರುದ್ಧ ಕಿಡಿ ಕಾರಿ, ಯಾವ ಪುರುಷಾರ್ಥಕ್ಕೆ ನೀವು ಸಾಧನಾ ಸಮಾವೇಶ ಮಾಡುತ್ತಿದ್ದೀರಿ? ನಿರಂತರವಾಗಿ ಬೆಲೆ ಏರಿಕೆ ಮಾಡುತ್ತ ಬಂದಿದ್ದೀರಿ. ರಾಜ್ಯದಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಸತತವಾಗಿ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವಿಟ್ ಮಾಡಿ, ನುಡಿದಂತೆ ನಡೆಯುವ ಪ್ರತಿಜ್ಞೆಯೊಂದಿಗೆ – ಪಂಚ ಗ್ಯಾರಂಟಿಗಳ ಕ್ರಾಂತಿಯೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಈ ಎರಡು ವರ್ಷ ಎಂದರೆ ಕೇವಲ ದಿನಗಳಲ್ಲ. ಇದು ಆರ್ಥಿಕಾಭಿವೃದ್ಧಿಯ ನಾಗಾಲೋಟದ ದಿನಗಳು, ಬಡ ಕುಟುಂಬಗಳಲ್ಲಿ ಆಶಾಕಿರಣ ತಂದ ದಿನಗಳು.

ದಿನಗೂಲಿ ಮಾಡುವ ಬಡವನೊಬ್ಬ ನಿರಾಳತೆಯಿಂದ ಸಂಭ್ರಮಿಸಿದ ದಿನಗಳು, ಗೃಹಿಣಿಯೊಬ್ಬಳು ಮನೆಗೆ ಬೇಕಾದ ವಸ್ತುಗಳನ್ನು ದುಡ್ಡು ಕೊಟ್ಟು ತಂದು ಸ್ವಾಭಿಮಾನದಿಂದ ಮುಗುಳ್ಳಗೆ ನಕ್ಕ ದಿನಗಳು.

ಇಂದು ಹೊಸಪೇಟೆಗೆ ಬನ್ನಿ, ಎರಡು ವರ್ಷಗಳ ಸಮರ್ಪಣಾ ಸಂಕಲ್ಪದಲ್ಲಿ ಸೇರೋಣ. ವಿಜಯನಗರದಿಂದ ನಾಡಿನ ಪ್ರಗತಿಯ ರಥಕ್ಕೆ ಮತ್ತಷ್ಟು ಶಕ್ತಿ ತುಂಬಿ ಎಳೆಯೋಣ ಎಂದಿದ್ದಾರೆ.

ರಾಜಕೀಯ

ಬಿಜೆಪಿಯಲ್ಲಿ ಮುಗಿಯದ ಬಿಕ್ಕಟ್ಟು… ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭಸುದ್ದಿ ಎಂದು ಯತ್ನಾಳ್ ಪೋಸ್ಟ್‌..!!

ಬಿಜೆಪಿಯಲ್ಲಿ ಮುಗಿಯದ ಬಿಕ್ಕಟ್ಟು… ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭಸುದ್ದಿ ಎಂದು ಯತ್ನಾಳ್ ಪೋಸ್ಟ್‌..!!

ರಾಜ್ಯ ಬಿಜೆಪಿಯಲ್ಲಿ (BJP) ಬಣಬಡಿದಾಟ ದಿನೇದಿನೇ ತೀವ್ರಗೊಳ್ಳುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಜಟಿಲ ವಾಗುತ್ತಿದೆ.

[ccc_my_favorite_select_button post_id="111173"]
ಕೆಎಸ್‌ಆರ್‌ಟಿಸಿಯ ವಿನೂತನ ಧ್ವನಿ ಸ್ಪಂದನೆ ಯೋಜನೆ ಚಾಲನೆ

ಕೆಎಸ್‌ಆರ್‌ಟಿಸಿಯ ವಿನೂತನ ಧ್ವನಿ ಸ್ಪಂದನೆ ಯೋಜನೆ ಚಾಲನೆ

ದೃಷ್ಟಿ ವಿಶೇಷ ಚೇತನರಿಗೆ KSRTC ಯ 200 ಬಸ್ಸುಗಳಲ್ಲಿ, ಅವರ ಆಯ್ಕೆಯ ಬಸ್ ಮಾರ್ಗವನ್ನು ಸೆಲೆಕ್ಟ್ ಮಾಡಲು ಧ್ವನಿ ಸ್ಪಂದನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (RamalingaReddy)

[ccc_my_favorite_select_button post_id="111154"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿ.. ಮಾರಕಾಸ್ತ್ರಗಳಿಂದ ಹಲ್ಲೆ..!

ಎಣ್ಣೆ ಪಾರ್ಟಿಯಲ್ಲಿ (Drinks party) ಜತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

[ccc_my_favorite_select_button post_id="111121"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!