ದೊಡ್ಡಬಳ್ಳಾಪುರ: ಜುಲೈ 16 ರಂದು ಕಾಣೆಯಾಗಿದ್ದ ನಗರದ ದರ್ಗಾಜೋಗಿಹಳ್ಳಿ ನಿವಾಸಿ ನಂಜಪ್ಪ ಎನ್ನುವವರ ಮೊಮ್ಮಗ ಚೇತನ್ ಎನ್ನುವ 15 ವರ್ಷದ ಬಾಲಕ (Boy) ಪತ್ತೆಯಾಗಿದ್ದಾನೆ.
ಈ ಕುರಿತಂತೆ ಬಾಲಕನ ತಾಯಿ ಪ್ರತಿಮ ಗಜೇಂದ್ರ ಅವರು ಹರಿತಲೇಖನಿಗೆ ಮಾಹಿತಿ ನೀಡಿದ್ದು ಬಾಲಕನನ್ನು ಕ್ಷೇಮವಾಗಿ ಮನೆಗೆ ಕರೆತರಲಾಗಿದೆ.
ಜುಲೆ. 16 ರಂದು ಶಾಲೆಗೆ ತೆರಳಲು ಸಿದ್ಧವಾಗುತ್ತಿದ್ದ ಬಾಲಕ, ಏಕಾಏಕಿ ಯಾರಿಗೂ ತಿಳಿಸದೆ ಮನೆಯಿಂದ ತೆರಳಿದ್ದು, ಹಿಂತಿರುಗಿ ಬಂದಿರಲಿಲ್ಲ. ಈ ಕುರಿತಂತೆ ಪೋಷಕರು ಹುಡುಕಾಟ ನಡೆಸಿ, ಸಿಗದೆ ಇದ್ದ ಕಾರಣ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬಾಲಕನ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಅವರು ಕೂಡ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ಶಾಲೆಗೆ ತೆರಳಲಿಲ್ಲವೆಂದು ಪೋಷಕರು ಬೈಯ್ಯಬಹುದೆಂದು ಆತಂಕಗೊಂಡ ಬಾಲಕ, ಮನೆ ಬಿಟ್ಟು ಮೈಸೂರಿಗೆ ತೆರಳಲು ಟಿಕೆಟ್ ಬುಕ್ ಮಾಡಲು ಮೊಬೈಲ್ ನಂಬರ್ ನೀಡಿದ ವೇಳೆ ಪೋಷಕರಿಗೆ ಮೆಸೇಜ್ ಬಂದಿದ್ದು, ಕೂಡಲೇ ಪೋಷಕರು ರೈಲ್ವೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು ತಮ್ಮ ಬಳಿಯೆ ಇರಿಸಿಕೊಂಡಿದ್ದಾರೆ.
ಬಳಿಕ ಪೋಷಕರು ತೆರಳಿ ಬಾಲಕ ಚೇತನ್‌ನನ್ನು ಕರೆತಂದಿದ್ದಾರೆ.
ಬಾಲಕನ ನಾಪತ್ತೆಯಾದ ಕಾರಣ ಆತಂಕಗೊಂಡಿದ್ದ ಪೋಷಕರು ಬಾಲಕ ಪತ್ತೆಯಾಗಿ, ಮನೆಗೆ ಮರಳಿರುವುದು ಸಂತಸವನ್ನು ಉಂಟುಮಾಡಿದೆ.