ಇಳಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಭಾಸ್ಕರ್ (Bhaskar) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಸಾಧಕರಿಗೆ ಬಸವ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಚಿತ್ತರಗಿಯ ಸಂಸ್ಥಾನ ಮಠ ಇಳಕಲ್ ವಿಜಯ ಮಾಂತೇಶ ಮಠದ ದಾಸೋಹ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶ್ರೀ ಗುರು ಮಹಾಂತ ಸ್ವಾಮೀಜಿ, ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ನಂದವಾಡಗಿಯ ಚನ್ನಬಸವ ಸ್ವಾಮೀಜಿ, ವಿರಕ್ತ ಮಠ ಕೊಣ್ಣೂರು ಶ್ರೀ ಚನ್ನವೀರೇಶ್ವರ ಮಹಾ ಸ್ವಾಮೀಜಿ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತಿಗಳು, ಸಾಧಕರು ಭಾಗವಹಿಸಿದ್ದರು.
ಕರುನಾಡು ಹಣತೆ ಕವಿ ಬಳಗ ರಾಜ್ಯ ಕೇಂದ್ರ ಘಟಕ ಚಿತ್ರದುರ್ಗ, ಜಿಲ್ಲಾ ಘಟಕ ಬಾಗಲಕೋಟೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಘಟಕ ಇಳಕಲ್ ಸಹಯೋಗದಲ್ಲಿ ಕಲ್ಯಾಣ ಕನ್ನಡೋತ್ಸವ ಹಾಗೂ ಮಕ್ಕಳ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವ ಸಮಾರಂಭ ಮತ್ತು ಎರಡು ಕೃತಿಗಳ ಲೋಕಾರ್ಪಣೆ ನಡೆಸಲಾಯಿತು.