ಶಿಮ್ಲಾ: ಬುಡಕಟ್ಟು ಸಮುದಾಯಗಳಲ್ಲೊಂದಾದ ‘ಹಟ್ಟಿ ಸಮುದಾಯ’ ಶತಮಾನಗಳಷ್ಟು ಹಳೆಯ ಬಹು ಪತಿತ್ವ (Polygamy) ಪದ್ಧತಿಯನ್ನು ಈಗಲೂ ಮುಂದುವರಿಸಿಕೊಂಡು ಬರುತ್ತಿದ್ದ ಬರುತ್ತಿದೆ.
ಹಟ್ಟಿ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಮಾಚಲ ಪ್ರದೇಶದ ರಾಜ್ಯದ ಶಿಕ್ಷೆ ಗ್ರಾಮದಲ್ಲಿ ಸೋದರರಿಬ್ಬರು ಒಬ್ಬಳೇ ಯುವತಿಯನ್ನು ವರಿಸಿದ್ದಾರೆ.
ಈ ವರೆಗೂ ಖಾಸಗಿಯಾಗಿಯೇ ನಡೆಯುತ್ತಿದ್ದ ಬಹು ಪತಿತ್ವ ಪದ್ಧತಿಯ ವಿವಾಹಗಳು ಈ ಬಾರಿ ಬಹಿರಂಗವಾಗಿ, ಭಾರೀ ಅದ್ದೂರಿಯಾಗಿ ಬಲು ಸಾಂಪ್ರದಾಯಿಕವಾಗಿ ಒಂದೇ ಮುಹೂರ್ತದಲ್ಲಿ ನಡೆದಿದೆ.
In a rare instance of polyandry, two brothers from Himachal Pradesh's Hatti tribe married the same woman in a traditional ceremony known as Jodidara. The practice, rooted in preserving ancestral land and family unity, is still legally recognised in parts of the state despite its… pic.twitter.com/QYM9Z6JPGQ
— Kavita Ranga (@kavitaranga556) July 20, 2025
ಶಿಲೈ ಗ್ರಾಮದ ಸೋದರರಾದ ಪ್ರದೀಪ್ ಮತ್ತು ಕಪಿಲ್ ಹಾಗೂ ಸುನೀತಾರ ವಿಶಿಷ್ಟ ವಿವಾಹಕ್ಕೆ ಸಾವಿರಾರು ಬಂಧು ಮಿತ್ರರು, ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಪ್ರದೀಪ್ ಸರಕಾರಿ ನೌಕರಿಯಲ್ಲಿದ್ದರೆ, ಕಿರಿಯ ಸೋದರ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಒಬ್ಬಳೇ ಪತ್ನಿಯನ್ನು ಹಲವು ಸೋದರರು ವಿವಾಹವಾಗುವ ಪದ್ಧತಿ ಮೊದಲಿನಿಂದಲೂ ನಮ್ಮ ಪಂಗಡದಲ್ಲಿದೆ. ಈ ವಿವಾಹದ ನಿರ್ಧಾರವನ್ನು ನಾವು ಮೂವರು ಒಟ್ಟಿಗೆ ಸೇರಿ ತೆಗೆದುಕೊಂಡಿದ್ದೇವೆ. ನಮ್ಮ ಸಮುದಾಯದ ಪದ್ಧತಿ ಮುಂದುವರಿಸಿಕೊಂಡು ಹೋಗುವ ವಿಚಾರದಲ್ಲಿ ನಮಗೆ ಹೆಮ್ಮೆಯಿದೆ. ಅದಕ್ಕೆಂದೇ ಬಹಿರಂಗವಾಗಿಯೇ ವಿವಾಹವಾಗಿದ್ದೇವೆ ಎಂದು ವರ ಪ್ರದೀಪ್ ಹೇಳಿದ್ದಾರೆ.
‘ನಾನು ವಿದೇಶದಲ್ಲಿ ಇರಬಹುದು. ಆದರೆ, ಮೂವರು ಒಂದಾಗಿ ಸಂಸಾರ ತೂಗಿಸಿಕೊಂಡು ಹೋಗುತ್ತೇವೆ. ಸಂಪ್ರದಾಯ ಉಳಿಸುವ ಪಯಣದಲ್ಲಿ ಪರಸ್ಪರ ಸಹಕಾರಿಯಾಗಿರುತ್ತೇವೆ’ ಎಂದು ಕಪಿಲ್ ಹೇಳಿದ್ದಾರೆ.
ನನಗೂ ನಮ್ಮ ಪಂಗಡ ಸಂಪ್ರದಾಯದ ಬಗ್ಗೆ ಹೆಮ್ಮೆ ಇದೆ. ಇಬ್ಬರು ಪತಿಯನ್ನು ವರಿಸುವುದು ಸಂಪೂರ್ಣ ನನ್ನದೇ ತೀರ್ಮಾನ. ಯಾರ ಒತ್ತಾಯವೂ ಇಲ್ಲ ಎಂದು ವಧು ಸುನೀತಾ ಹೇಳಿದ್ದಾರೆ.
ಜು.12ರಂದು ಆರಂಭವಾದ ವಿವಾಹ ಸಂಪ್ರದಾಯ ಬದ್ದವಾಗಿ 3 ದಿನ ಕಾಲ ನಡೆದಿದೆ. ಸ್ಥಳೀಯ ಜಾನಪದ ಗೀತೆ ತಂಡಗಳು ಮತ್ತು ನೃತ್ಯ ತಂಡಗಳು ಮದುವೆ ಸಮಾರಂಭಕ್ಕೆ ಮೆರುಗು ತಂದವು. ವಿವಾಹದ ವಿಡಿಯೊ ವೈರಲ್ ಆಗಿವೆ.”
ಮೊದಲಯದೇನು ಅಲ್ಲ..!
ಇದೇನು ಮೊದಲ ವಿವಾಹವಲ್ಲ. ಇಂಥ ಮದುವೆಗಳು ನಮ್ಮ ಹಳ್ಳಿಯಲ್ಲಿ ಸದ್ದಿಲ್ಲದೇ ನಡೆಯುತ್ತವೆ.
ಇಬ್ಬರು-ಮೂವರು ಸೋದರರು ಒಬ್ಬಳನ್ನೇ ವರಿಸಿದ್ದಾರೆ. ಪೂರ್ವಜರ ಭೂಮಿ ವಿಭಜನೆಯಾಗದಂತೆ ತಡೆಯಲು, ಹೆಣ್ಣು ವಿಧವೆಯಾಗುವುದನ್ನು ತಪ್ಪಿಸುವುದಕ್ಕೆ ಪೂರ್ವಜರು ಕಂಡುಕೊಂಡ ಮಾರ್ಗವಿದು ಎಂದು ಶಿಲೈ ಗ್ರಾಮದ ನಿವಾಸಿ ಬಿಶನ್ ತೋಮರ್ ಹೇಳಿದ್ದಾರೆ.