ಯೆಮನ್; ಹತ್ಯೆ ಆರೋಪಡಿಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡ ರಿಲೀಫ್ ಸಿಕ್ಕಿದ್ದು, ಕುಟುಂಬಸ್ಥರು, ವಿವಿಧ ಮುಸ್ಲಿಂ ಸಂಘಟನೆಗಳು, ಮುಖಂಡರುಗಳ ಸತತ ಪ್ರಯತ್ನದ ಫಲವಾಗಿ ಮರಣದಂಡನೆ ಶಿಕ್ಷೆಯನ್ನು ಯುಮೆನ್ ರದ್ದುಗೊಳಿಸಿದೆ.
ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಲು ದೇಶದಾದ್ಯಂತ ಸಾಕಷ್ಟು ಕೂಗು ಕೇಳಿ ಬಂದಿತ್ತು. ಅದರಂತೆ ಇದೀಗ ಎರಡು ದೇಶದ ಮುಖಂಡರ ಸತತ ಪ್ರಯತ್ನದ ಫಲವಾಗಿ ನರ್ಸ್ ನಿಮಿಷಾ ಪ್ರಿಯಾರಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಯುಮೆನ್ ರದ್ದು ಪಡಿಸಿದೆ.
BIG BREAKING NEWS. Indian Nurse Nimisha Priya from Sanaa , Yemen Prison will be released . English & Telugu . pic.twitter.com/oAbX5LABly
— Dr KA Paul (@KAPaulOfficial) July 21, 2025
ಈ ಬಗ್ಗೆ ಧರ್ಮಭೋದಕ, ಜಾಗತಿಕ ಶಾಂತಿ ಪ್ರವರ್ತಕರಾದ ಡಾ.ಕೆ.ಎ ಪೌಲ್ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದು ಯುಮೆನ್ ಮುಖಂಡರ ಪ್ರಭಾವಶಾಲಿ ಹಾಗೂ ಪ್ರಾರ್ಥನಾ ಪೂರ್ವಕ ಪ್ರಯತ್ನಗಳಿಗೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.