ದೊಡ್ಡಬಳ್ಳಾಪುರ: ರಾಜ್ಯ ಮಟ್ಟದ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ (State Awareness Committee) ತಾಲೂಕಿನ ಮಧುರೆಯ ಕಾಂಗ್ರೆಸ್ ಮಹಿಳಾ ಬ್ಲಾಕ್ ಗ್ರಾಮಾಂತರ ಅಧ್ಯಕ್ಷೆ ಪುಷ್ಪಲತಾ ಸೋಮಶೇಖರ್ (Pushpalatha Somashekhar) ನೇಮಕವಾಗಿದ್ದಾರೆ.
ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿ,(1&2) ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ನರಸಿಂಹ ಮೂರ್ತಿ ಜಿ.ಕೆ ಆದೇಶಿಸಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಮಹಿಳಾ ಘಟಕದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ರೇವತಿ ಅನಂತ್ ರಾಮು ಅವರನ್ನು ಸದಸ್ಯರನ್ನಾಗಿ ಆದೇಶಿಸಲಾಗಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ರೇವತಿ ಅನಂತ್ ರಾಮು ಅವರ ಬದಲಿಗೆ, ಪುಷ್ಪಲತಾ ಸೋಮಶೇಖರ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.
ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಪುಷ್ಪಲತಾ ಸೋಮಶೇಖರ್ ಅವರನ್ನು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ತಾಪಂ ಮಾಜಿ ಸದಸ್ಯೆ ಚೆನ್ನಮ್ಮ ರಾಮಲಿಂಗಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಮಂಜುಳಾ, ತಿಮ್ಮರಾಯಗೌಡ, ಖಾದಿ ಗ್ರಾಮೋದ್ಯೋಗ ರಾಜ್ಯ ಸಮಿತಿ ಮಾಜಿ ನಿರ್ದೇಶಕ ದೊಡ್ಡತುಮಕೂರು ರಾಮಕೃಷ್ಣ, ದೊಡ್ಡಬಳ್ಳಾಪುರ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಗೌಡ ಮಲ್ಲೋಹಳ್ಳಿ, ಮುಖಂಡರಾದ ಭದ್ರಾಪುರ ಮೋಹನ್ ಮತ್ತಿತರರು ಶುಭ ಕೋರಿದರು.