ಗೌರಿಬಿದನೂರು: ಕರ್ನಾಟಕ ದ್ವಿಚಕ್ರ ವಾಹನ (Two-wheeler) ವರ್ಕ್‌ಷಾಪ್ ಮಾಲೀಕರ ಮತ್ತು ತಂತ್ರಜ್ಞರ ಸಂಘ, ಗೌರಿಬಿದನೂರು ದ್ವಿಚಕ್ರ ವಾಹನ ರಿಪೇರಿಗಾರರ ಸಂಘದ ಸಂಯುಕ್ರ ಆಶ್ರಯದಲ್ಲಿ 7ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಾಳೆ (ಜು.27) BS.6 ತರಬೇತಿ ಹಾಗೂ ಲೇಬರ್ ಕಾರ್ಡ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಸ್ಲಾಮಿಯ ಬೈತುಲ್‌ಮಾಲ್, ಶಾದಿಮಹಲ್ ನೇತಾಜಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮನ್ನು ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ ಅವರು ಉದ್ಘಾಟಿಸಲಿದ್ದಾರೆ.
ಕೆ.ಟಿ.ಡಬ್ಲ್ಯೂ.ಓ.ಟಿ.ಎ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್‌ಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9-00 ರಿಂದ ಸಂಜೆ 4-00 ರವರೆಗೆ BS.6 ತರಬೇತಿ ನೀಡಲಾಗುತ್ತಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಸಿಕಂದರ್ ಎಸ್.ಎ ತಿಳಿಸಿದ್ದಾರೆ.