ದೊಡ್ಡಬಳ್ಳಾಪುರ: ಬಿಗ್ ಬಾಸ್ ವಿನ್ನರ್ ನಟ ಪ್ರಥಮ್ (Pratham) ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಅವರು ಆರೋಪ ಮಾಡಿದ್ದಾರೆ.
ಈ ಕುರಿತಂತೆ ನಟ ಪ್ರಥಮ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದು, 4 ದಿನಗಳ ಹಿಂದೆ ಈ ಘಟನೆ ನಡೆದಿದ್ದು ನಿಜ, ನನ್ನ ಕೆಲಸದಲ್ಲಿ busyಇದ್ದೆ. ಜಗದೀಶ್ ರವರು ಫೋನ್ ಮಾಡುತ್ತಲೇ ಇದ್ರು ಅಂತ ಮಾತಾಡಿದೆ.
ಅದನ್ನ record ಮಾಡಿ social mediaಲಿ ಹಾಕಬೇಕಿರ್ಲಿಲ್ಲ! ನಾನು ಹೇಗೆ ಎಚ್ಚರಿಕೆಯಿಂದ ಇರ್ಬೇಕು ತಿಳಿದಿದೆ! ನಂಬಿಕೆ ಇಟ್ಟು ಮಾತಾಡಿದಾಗ record ಮಾಡಿ ಹಾಕ್ದ್ರಿಂದ ಇನ್ಮೇಲೆ ಹೇಗೆ ನಂಬೋದು ಹೇಳಿ? ಎಂದು ಜಗದೀಶ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
Audioಸ್ಪಷ್ಟನೆ!
— Olle Hudga Pratham (@OPratham) July 26, 2025
4 ದಿನಗಳ ಹಿಂದೆ ಈ ಘಟನೆ ನಡೆದಿದ್ದು ನಿಜ,ನನ್ನ ಕೆಲಸದಲ್ಲಿ busyಇದ್ದೆ.ಜಗದೀಶ್ ರವರು ಫೋನ್ ಮಾಡುತ್ತಲೇ ಇದ್ರು ಅಂತ ಮಾತಾಡಿದೆ.ಅದನ್ನrecord ಮಾಡಿsocial mediaಲಿ ಹಾಕಬೇಕಿರ್ಲಿಲ್ಲ!
ನಾನು ಹೇಗೆ ಎಚ್ಚರಿಕೆಯಿಂದ ಇರ್ಬೇಕು ತಿಳಿದಿದೆ!
ನಂಬಿಕೆ ಇಟ್ಟು ಮಾತಾಡಿದಾಗ recordಮಾಡಿ ಹಾಕ್ದ್ರಿಂದ ಇನ್ಮೇಲೆ ಹೇಗೆ ನಂಬೋದು ಹೇಳಿ?
ದೊಡ್ಡಬಳ್ಳಾಪುರ ಘಟನೆ ಸಂಬಂಧ ಜಗದೀಶ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಖಾಸಗಿ ತೋಟದಲ್ಲಿ ನಡೆದ ದೇವರ ಊಟಕ್ಕೆ ಬಂದಿದ್ದ ವೇಳೆ ರೌಡಿಗಳ ಗುಂಪು ಆತನನ್ನು ದೇವಾಲಯದ ಹಿಂಭಾಗ ಕರೆದಿಕೊಂಡು ಹೋಗಿ ಡ್ರಾಗರ್, ಲಾಂಗು ಸೇರಿದಂತೆ ಹರಿತವಾದ ಆಯುಧಗಳನ್ನು ಇಟ್ಟು ಹಲ್ಲೆ ಮಾಡಿದ್ದಾರೆಂದು ಲಾಯರ್ ಜಗದೀಶ್ ಆರೋಪಿಸಿದ್ದರು.
ಇನ್ನು, ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಖುದ್ದು ನಟ ಪ್ರಥಮ್ ಅವರಿಗೆ ಕರೆ ಮಾಡಿ ದೂರು ನೀಡುವಂತೆ ಕೇಳಿದ್ದು ಇದಕ್ಕೆ ಪ್ರಥಮ್ ಪ್ರತಿಕ್ರಿಯೆ ನೀಡಿಲ್ಲ ಎಂದು ಸಹ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
ಇನ್ನು ಹಲ್ಲೆ ಮಾಡುವ ವೇಳೆ ರೌಡಿಗಳ ಗುಂಪಿನೊಂದಿಗೆ ದಿ.ನಟ ಬುಲ್ಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲ್ಲೆಟ್ ಅಹ ಇದ್ದರು ಎಂದು ಸಹ ಆರೋಪಿಸಿದ್ದು, ಒಬ್ಬ ಸೆಲೆಬ್ರೆಟಿಗೆ ರಕ್ಷಣೆ ಇಲ್ಲದೆ ಹೋದರೆ ಹೇಗೆ ಎಂದು ಗೃಹಸಚಿವ ಪರಮೇಶ್ವರ್ ಹಾಗು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಜುಲೈ.22 ರಂದು ನಡೆದಿದೆ ಎನ್ನಲಾಗುತ್ತಿದ್ದು, ಇದುವರೆವಿಗೂ ಪ್ರಥಮ್ ದೂರು ನೀಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಇನ್ನೂ ಈ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಅಂದು ಈ ವ್ಯಾಪ್ತಿಯಲ್ಲಿ ಯಾವುದೇ ದೇವಾಲಯದ ಉದ್ಘಾಟನೆ ನಡೆದಿಲ್ಲ.
ಆದರೆ ಪ್ರಥಮ್ ದೊಡ್ಡಬಳ್ಳಾಪುರದ ನಂದಿಮೋರಿ ರಸ್ತೆ ವ್ಯಾಪ್ತಿಯಲ್ಲಿನ ಸ್ನೇಹಿತನ ತೋಟದಲ್ಲಿ ನಡೆದ ಮಾಂಸದೂಟದಲ್ಲಿ ಭಾಗಿಯಾಗಿದ್ದರು, ಈ ವೇಳೆ ಗೆಳೆಯರ ನಡುವೆ ತಮಾಷೆಯಾಗಿಯೇ ಇದ್ದು, ಸ್ಥಳದಿಂದ ತೆರಳಿದ್ದಾರೆ ಎನ್ನಲಾಗುತ್ತಿದ್ದು, ಯಾವುದೇ ಗಲಾಟೆಯಾಗಲಿ, ಹಲ್ಲೆಯಾಗಲಿ ನಡೆದಿಲ್ಲ ಎಂದು ಸ್ಥಳದಲ್ಲಿದ್ದವರು ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೀಗ ಬಂದ ಮಾಹಿತಿ ಅನ್ವಯ, ಇಂದು ಸಂಜೆ ಪ್ರಥಮ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಬಂದು ದೂರು ನೀಡಬಹುದು ಎಂದು ತಿಳಿದುಬಂದಿದೆ.