ಬೆಂಗಳೂರು: ಮನೆಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Court) ಇಂದು ತೀರ್ಪು ಪ್ರಕಟಿಸಿದೆ.
ಈ ಬೆನ್ನಲ್ಲೇ ನಟಿ ರಮ್ಯಾ ಪ್ರತಿಕ್ರಿಯಿಸಿದ್ದು, ಎಲ್ಲ ಮಹಿಳೆಯರಿಗೆ ನ್ಯಾಯ ದೊರಕಿತು ಎಂದು ಹೇಳಿದ್ದಾರೆ.
Justice served for all the women! https://t.co/6QFfwnutzS
— Ramya/Divya Spandana (@divyaspandana) August 1, 2025
ಈಗಾಗಲೇ ನಟ ದರ್ಶನ್ ಪ್ರಕರಣದ ಕುರಿತು ಪೋಸ್ಟ್ ಮಾಡಿ, ಅಭಿಮಾನಿಗಳು ಎನ್ನಲಾದವರಿಂದ ಅಶ್ಲೀಲ ಪದ ಬಳಕೆ ಕುರಿತು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಮಾಜಿ ಸಂಸದೆ ರಮ್ಯಾ ( Ramya) ಈಗ ಪ್ರಜ್ವಲ್ ಪ್ರಕರಣದ ಕುರಿತು ಟ್ವೀಟ್ ಮಾಡಿದ್ದಾರೆ.