ದೊಡ್ಡಬಳ್ಳಾಪುರ: ಕವನ ಸಂಕಲನ ಪ್ರಣವ ಭಾನು ಕೃತಿಯ ಬಿಡುಗಡೆ

Doddaballapura: Release of poetry collection Pranav Bhanu

ದೊಡ್ಡಬಳ್ಳಾಪುರ (Doddaballapura): ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವು ಧಾರ್ಮಿಕ, ನೈತಿಕ, ಮತ್ತು ಸಾಮಾಜಿಕ ಮೌಲ್ಯಗಳಿಂದ ವಿಶ್ವವಿಖ್ಯಾತವಾಗಿವೆ ಎಂದು ಜ್ಞಾನ ಗಂಗಾ ಸಾಹಿತ್ಯ ರಂಗ ವೇದಿಕೆಯ ಅಧ್ಯಕ್ಷ ಮಣ್ಣೆ ಮೋಹನ್ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ಕವಯಿತ್ರಿ ಎಂ.ಬಿ.ಯಶೋಧಮ್ಮ ಅವರ ಕವನ ಸಂಕಲನ ಪ್ರಣವ ಭಾನು ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತೀಯ ಭವ್ಯ ಪರಂಪರೆಯ ಕಲೆ, ಸಾಹಿತ್ಯ, ಸಂಗೀತ ಮುಂತಾದ ಸಾಂಸ್ಕೃತಿಕತೆಗಳನ್ನು ಸೃಷ್ಟಿ ಮಾಡಿದವರು ಎಂದಿಗೂ ಪೂಜ್ಯನೀಯರು.  ಇಂದಿನ ಮಕ್ಕಳನ್ನು ನಾವು ಭಾರತೀಯ ಸಂಸ್ಕೃತಿಯ ಪ್ರಚಾರಕರಾಗಿ ಮಾಡಬೇಕಾಗಿದೆ ಎಂದರು.

ಕನ್ನಡ ನಾಡಿನ ರಾಜರುಗಳ ಸಾಮ್ರಾಜ್ಯ  ವಿಸ್ತರಣೆ ಮತ್ತು ಆಳ್ವಿಕೆ  ಕನ್ನಡಿಗರಿಗೆ ಹೆಗ್ಗಳಿಕೆ  ವಿಚಾರವಾಗಿದೆ. ಕನ್ನಡ ನಾಡು ನುಡಿಗೆ ಕನ್ನಡ ರಾಜರುಗಳ ಕೊಡುಗೆ ಅಪಾರವಾಗಿದೆ. ಕನ್ನಡ ನಾಡು-ನುಡಿಯ ವೈಭವದ ಬಗ್ಗೆ ಕನ್ನಡಿಗರು ಸದಾ ಹೆಮ್ಮೆ ಪಡುತ್ತಾರೆ. ಕನ್ನಡ ಕವಿಗಳ ಕಾವ್ಯಧಾರೆ ನಿರಂತರವಾಗಿ ಹರಿಯುತ್ತಿದೆ. ಕನ್ನಡ ಕವಿಗಳು ತಮ್ಮ ಸೃಜನಶೀಲತೆಯಿಂದ ಕನ್ನಡ ಕಾವ್ಯ ಲೋಕವನ್ನು ವೈವಿಧ್ಯಗೊಳಿಸಿದ್ದಾರೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ ಮಾತನಾಡಿ, ಕವಯಿತ್ರಿ ಎಂ.ಬಿ. ಯಶೋಧಮ್ಮ ಅವರ ಪ್ರಣವ ಭಾನು ಕವನ ಸಂಕಲನ ಸಹೃದಯರ ಮನದಲ್ಲಿ   ಆಲೋಚನೆ ಶಕ್ತಿಯನ್ನು ವೃದ್ಧಿಸುತ್ತದೆ. 

ಕವಿತೆಗಳಲ್ಲಿ ಸಮಾಜದ ಸಮಸ್ಯೆಗಳು, ಮಾನವ ಭಾವನೆಗಳು ಮತ್ತು ಜೀವನದ ಅನುಭವಗಳನ್ನು ಒಳಗೊಂಡಿವೆ.ಕವನ ಸಂಕಲನದಲ್ಲಿರುವ ಕವಿತೆಗಳ ಶೈಲಿ, ನಿರೂಪಣೆ ಉತ್ತಮವಾಗಿದೆ. ಕನ್ನಡ ಸಾಹಿತ್ಯಕ್ಕೆ ಕವಯಿತ್ರಿಯರ ಕೊಡುಗೆ ಅಪಾರವಾಗಿದೆ, ಮಹಿಳಾ ಸಾಹಿತಿಗಳು ವಿವಿಧ ಪ್ರಕಾರಗಳಲ್ಲಿ ವೈವಿಧ್ಯಮಯ. ಸಾಹಿತ್ಯವನ್ನು ರಚನೆ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರೊ.ಚಂದ್ರಪ್ಪ ಮಾತನಾಡಿ, ಕವಿಗಳು  ಮತ್ತು ಬರಹಗಾರರು ನಿರಂತರವಾಗಿ  ಅಧ್ಯಯನಶೀಲರಾಗಿರಬೇಕು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅನನ್ಯತೆ ಅರಿವು, ಲೋಕಾನುಭವದ ಜೊತೆಗೆ ಮಾನವೀಯತೆ, ಸಾಮಾಜಿಕ ಪ್ರಜ್ಞೆ  ಹೊಂದಿರಬೇಕು. ಕಾವ್ಯವು ಜನರನ್ನು ತಲುಪಿದಾಗ ಮಾತ್ರ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ. ಬದುಕಿನ ಅನುಭವಗಳನ್ನು, ವೈಯಕ್ತಿಕ ಚಿಂತನೆಗಳನ್ನು, ಮತ್ತು ಸಮಾಜದ ವಾಸ್ತವವನ್ನು ಅಭಿವ್ಯಕ್ತಿಗೊಳಿಸುವ ಕವಿ ಸಮಾಜಮುಖಿ ಜೀವನ ಶೈಲಿ ಹೊಂದಿರಬೇಕು ಎಂದರು.

ದೊಡ್ಡಬಳ್ಳಾಪುರ: ಕವನ ಸಂಕಲನ ಪ್ರಣವ ಭಾನು ಕೃತಿಯ ಬಿಡುಗಡೆ

ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಪರಿಣಿತ ನೃತ್ಯ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕೃಷಿಕರಾದ ಎಂ.ಪಿ.ಬಸವರಾಜು ಅವರು ಪ್ರಣವ ಭಾನು ಕವನ ಸಂಕಲನ ಬಿಡುಗಡೆ ಮಾಡಿದ ಸಮಾರಂಭದಲ್ಲಿ ಜನಪ್ರಿಯ ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ, ಕವಯಿತ್ರಿ ಎಂ.ಬಿ.ಯಶೋಧಮ್ಮ, ಶಿಕ್ಷಕ ಅಶೋಕಕುಮಾರ್,  ದೊಡ್ಡಬಳ್ಳಾಪುರ ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ ಜಿ.ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ವಿ.ಚಂದ್ರಪ್ಪ, ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಶಿಕ್ಷಕ ವಿ.ಎಸ್. ಹೆಗಡೆ ಮುಂತಾದವರು ಭಾಗವಹಿಸಿದ್ದರು.

ರಾಜಕೀಯ

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ ಬಿ.ಮುನೇಗೌಡ ಬೆಂಬಲಿಗರ ಸಭೆ..!

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ

ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ (JDS) ಪಕ್ಷದಲ್ಲಿ ಆಕ್ರೋಶ ಸ್ಪೋಟವಾಗಿದ್ದು, ಬಿ.ಮುನೇಗೌಡ (B.Mine Gowda, ಹುಸ್ಕೂರು ಆನಂದ್ (Huskur Anand), ಬೆಂಬಲಿಗರು ಇಂದು ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಭೆ ಸೇರಿ,

[ccc_my_favorite_select_button post_id="121521"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]