ಬೆಂಗಳೂರು: ಇಂದು ಸಂಜೆಯಿಂದ ಸುರಿಯುತ್ತಿರುವ ಭೀಕರ ಆಲಿಕಲ್ಲು ಮಳೆಗೆ ನಗರದಲ್ಲಿ ದೊಡ್ಡ ದುರಂತವೇ ಸಂಭವಿಸಿದೆ. ಮಳೆಯ ಆರ್ಭಟಕ್ಕೆ ಶಿವಾಜಿನಗರದಲ್ಲಿನ ಬೌರಿಂಗ್ ಆಸ್ಪತ್ರೆಯ (Bowring Hospital) ಶವಾಗಾರದ ಸಮೀಪವಿರುವ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ, ಸ್ಥಳದಲ್ಲಿದ್ದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರ ಸಂಜೆಯಿಂದ ರಾಜಧಾನಿಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಶವಾಗಾರದ ಬಳಿ ಜನರು ಆಶ್ರಯ ಪಡೆದಿದ್ದ ವೇಳೆ ಈ ಹಳೆಯ ಗೋಡೆ ಕುಸಿದಿದೆ ಎನ್ನಲಾಗಿದೆ.
ಘಟನೆಯಲ್ಲಿ ಗೋಡೆಯ ಅವಶೇಷಗಳಡಿ ಸಿಲುಕಿ ಏಳು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದೀಗ ಬಂದ ಮಾಹಿತಿ ಅನ್ವಯ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 8 ಮಂದಿ ಬೀದಿ ಬದಿ ವ್ಯಾಪಾರಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.
#Breaking
— TOI Bengaluru (@TOIBengaluru) April 29, 2026
Rain-related death toll in Bengaluru touches 8.
Rescue operations underway at Bowring Hospital in #Bengaluru’s Shivajinagar, where a compound wall collapsed on people 👇@timesofindia pic.twitter.com/kBOsTcKVw9
ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಣ್ಣಿನಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ.
ಮೃತದೇಹಗಳನ್ನು ಹೊರತೆಗೆಯಲು ಜೆಸಿಬಿ ಯಂತ್ರಗಳ ನೆರವು ಪಡೆಯಲಾಗುತ್ತಿದೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ ಸೃಷ್ಟಿಸಿದ ಅವಾಂತರ
Situation at Silk Board metro station at 6:00 pm today – just after one rain! #BangaloreRains
— Bangalore Metro Updates (@WF_Watcher) April 29, 2026
It’s the same spot that was heavily water logged in May 2025. Looks like nothing has been done to avoid such situation again. vc: Twitter follower. pic.twitter.com/g72NQhfWbU
ಮಳೆಯ ಅಬ್ಬರಕ್ಕೆ 50ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೆಜೆಸ್ಟಿಕ್, ಶಿವಾಜಿನಗರ, ಎಂ.ಜಿ. ರಸ್ತೆ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗುತ್ತಿದ್ದು, ರಸ್ತೆಗಳು ಕೆರೆಯಂತಾಗಿವೆ.
ಮಳೆರಾಯನ ಆರ್ಭಟಕ್ಕೆ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದ್ದು, ಬಿಬಿಎಂಪಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ಹೈ ಅಲರ್ಟ್ ಆಗಿವೆ.
Not snow it's hailstorm in Bengaluru!
— Harish Upadhya (@harishupadhya) April 29, 2026
Areas around Vidhana Soudha hit by intense hail, Kanteerava Stadium filled with heaps of hailstones. Rare visuals for the city.#BengaluruRains pic.twitter.com/wHX96QoIP1
ಈ ಮಧ್ಯೆ ವಿಧಾನ ಸೌಧದ ಸುತ್ತಮುತ್ತ ಸೇರಿ ಹಲವೆಡೆ ಭಾರಿ ಆಲಿಕಲ್ಲು ಮಳೆಯಾಗಿದೆ. ಈ ವೇಳೆ ರಸ್ತೆಗಳು ಹಿಮದ ಹೊದಿಕೆಯಂತೆ ಕಂಡುಬಂತು. ಕಂಠೀರವ ಕ್ರೀಡಾಂಗಣ ಆಲಿಕಲ್ಲಿನಿಂದ ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಜನರನ್ನು ಚಕಿತಗೊಳಿಸಿದೆ.

