ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ( ಅಕ್ಟೋಬರ್ 1 ರಂದು) 130 ಪುರುಷರು ಹಾಗೂ 39 ಮಹಿಳೆಯರು ಸೇರಿದಂತೆ 169 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಬುಲೆಟಿನ್ ವರದಿ ತಿಳಿಸಿದೆ.
ಬೆಂ.ಗ್ರಾ.ಜಿಲ್ಲೆಯಲ್ಲಿ ಜಿಲ್ಲಾ ಬುಲೆಟಿನ್ ಹಾಗೂ ತಾಲೂಕು ಬುಲೆಟಿನ್ ಗಳ ನಡುವೆ ವೆತ್ಯಾಸ ಹೆಚ್ಚಿರುವುದನ್ನು ಸರಿಪಡಿಸಲಾಗದ ಜಿಲ್ಲಾಡಳಿತ. ತಾಲೂಕು ಆಡಳಿತ ನೀಡುತ್ತಿದ್ದ ಬುಲೆಟಿನ್ ವರದಿಗಳನ್ನು ತಡೆಹಿಡಿದಿರುವ ಕಾರಣ ಸರಿಯೋ ತಪ್ಪೋ..ಜಿಲ್ಲಾ ಆರೋಗ್ಯ ಇಲಾಖೆ ನೀಡುವ ವರದಿಯನ್ನೆ ಬೆಂ.ಗ್ರಾ ಜಿಲ್ಲೆಯ ಜನತೆ ನಂಬಬೇಕಿದೆ.
ಅದರಂತೆ ನೆಲಮಂಗಲ ತಾಲ್ಲೂಕಿನಲ್ಲಿ 38 ಪುರುಷರು ಮತ್ತು 11 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 27 ಪುರುಷರು ಮತ್ತು 9 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 24 ಪುರುಷರು ಮತ್ತು 7 ಮಹಿಳೆಯರು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 38 ಪುರುಷರು ಮತ್ತು 12 ಮಹಿಳೆಯರು ಹಾಗೂ ಬೆಂಗಳೂರು ನಗರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಗೆ ಸೇರಿದ 3 ಪುರುಷರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಒಂದು ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 56 ವರ್ಷದ ಪುರುಷರೊಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.

