ದೊಡ್ಡಬಳ್ಳಾಪುರ: ಪ್ರಸ್ತುತ ಕರೊನಾ ಸಂದರ್ಭದಲ್ಲಿ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ, ಸೋಂಕು ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಚಿರ ಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ರವಿಮಾವಿನಕುಂಟೆ ಮನವಿ ಮಾಡಿದರು.
ತಾಲೂಕಿನ ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಹಾಗೂ ಚಿಗುರು ಮಲ್ಟಿ ಸ್ಪಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಪ್ರತಿ ವರ್ಷವು ಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಹುಟ್ಟು ಹಬ್ಬದ ಅಂಗವಾಗಿ ಅನೇಕ ಸಾಮಾಜಿಕ ಕಾರ್ಯಕ್ರಮವ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಕರೊನಾ ಹಿನ್ನಲೆಯಲ್ಲಿ ಮಧುರೆ ಹೋಬಳಿ ಕನಸವಾಡಿ ಸುತ್ತ ಮುತ್ತಲಿನ ಗ್ರಾಮದ ಜನರಿಗೆ ಅನುಕೂಲವಾಗಲಿ ಎಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದರು.
ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಲಿಕ ಡಾ. ಸಿ.ನಾಗರಾಜ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಕರೊನಾ ಸೋಂಕು ಗಣನಿಯವಾಗಿ ಹೆಚ್ಚುತ್ತಿದ್ದು, ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹಾಗೂ ಬೇಕಾದ ಪರಿಕರಗಳ ಕೊರತೆ ಕಾಡುತ್ತಿದೆ. ಪರೀಕ್ಷೆ ಮಾಡಿದ ಎಲ್ಲರಿಗೂ ಕರೊನಾ ಸೋಂಕು ಕಂಡು ಬರುತ್ತಿಲ್ಲ. ಕರೊನಾ ಬಂದರೆ ಭಯಪಡುವ ಅಗತ್ಯವಿಲ್ಲ. ಉತ್ತಮ ಆಹಾರ, ಬಿಸಿ ನೀರು ಅಡಿಗೆ ಮನೆಯ ಸಿಗುವ ಕಷಾಯ ಬಳಸುವುದರಿಂದ ಇದನ್ನು ನಿಯಂತ್ರಸಬಹುದು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಡಿ ಸತ್ಯನಾರಾಣಗೌಡ ಮಾತನಾಡಿ, ಇಂತಹ ಸಂಕಷ್ಟ ಸಮಯದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವುದರಿಂದ ಈ ಭಾಗದ ಜನರು ಉಚಿತವಾಗಿ ಆರೋಗ್ಯ ಪರೀಕ್ಷೆ ಹಾಗೂ ಔಷಧಿ ಪಡೆಯ ಬಹುದಾಗಿದೆ. ಗಾಂದಿ ಜಯಂತಿಯ ದಿನಾಚರಣೆಯಲ್ಲಿ ಸರ್ಕಾರದ ನಿಬಂಧನೆಗಳಿರುವ ಕಾರಣ ಗಾಂದಿ ಜಯಂತಿ ಕಾರ್ಯಕ್ರಮಕ್ಕೆ ಜನರು ಸೇರುವಂತಿಲ್ಲ. ಬಂದಿರುವ ಎಲ್ಲರೂ ಇದರ ಅನುಕೂಲ ಪಡೆಯಿರಿ. ಮಧುಮೇಹ, ರಕ್ತದೊತ್ತಡ, ಇನ್ನಿತರ ಕಾಯಿಲೆಗಳ ಪರೀಕ್ಷೆಗಳನ್ನು ಮಾಡಿಸಿ ಅದಕ್ಕೆ ಬೇಕಾದ ಔಷಧಿ ಪಡೆದು ಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಎಸ್.ಪಾಟೀಲ್, ಡಾ.ಪಲ್ಲವಿ, ಸಮಿತಿಯ ಜಿಲ್ಲಾಧ್ಯಕ್ಷ ಸುಬ್ರಮಣಿ, ಜಿಲ್ಲಾ ಗೌರವ ಅಧ್ಯಕ್ಷ ಅನಿಲ್ ಕುಮಾರ್, ತಾ.ಅಧ್ಯಕ್ಷ ಅಶೋಕ್, ಗೌರವ ಅಧ್ಯಕ್ಷ ನಾಗರಾಜನಾಯ್ಕ್, ಕಾರ್ಮಿಕ ಘಟಕದ ಅಧ್ಯಕ್ಷ ಆನಂದ್, ರಮೇಶ್, ಶ್ರೀನಿವಾಸ್, ಬೈರೇಗೌಡ ಇದ್ದರು.

