ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ( ಅಕ್ಟೋಬರ್ 2 ರಂದು) 207 ಪುರುಷರು ಹಾಗೂ 91 ಮಹಿಳೆಯರು ಸೇರಿದಂತೆ 298 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಕೋವಿಡ್-19 ಬುಲೆಟಿನ್ ವರದಿ ತಿಳಿಸಿದೆ.
ವರದಿಯಂತೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 69 ಪುರುಷರು ಮತ್ತು 27 ಮಹಿಳೆಯರು,ನೆಲಮಂಗಲ ತಾಲ್ಲೂಕಿನಲ್ಲಿ 47 ಪುರುಷರು ಮತ್ತು 18 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 47 ಪುರುಷರು ಮತ್ತು 25 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 42 ಪುರುಷರು ಮತ್ತು 21 ಮಹಿಳೆಯರು ಹಾಗೂ ಬೆಂಗಳೂರು ನಗರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಗೆ ಸೇರಿದ 2 ಪುರುಷರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.

