ಅಬುಧಾಬಿ: ಐಪಿಎಲ್ 2020ರ ಆವೃತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3ನೇ ಗೆಲುವು ಪಡೆದಿದೆ.
ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ನಾಲ್ಕನೆ ಪಂದ್ಯದಲ್ಲಿ ಪಡಿಕ್ಕಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಬೊಂಬಾಟ್ ಆಟದಲ್ಲಿ 8 ವಿಕೆಟ್‍ಗಳ ಗೆಲುವು ತನ್ನದಾಗಿಸಿಕೊಂಡಿದೆ.
155 ರನ್ ಗಳ ರನ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್ ಬೌಂಡರಿ, ಸಿಕ್ಸರ್ ಮೂಲಕ ಉತ್ತಮ ಆರಂಭವನ್ನೇ ನೀಡಿದರು.
ಪಡಿಕ್ಕಲ್ 63 ರನ್ , ವಿರಾಟ್ ಕೊಹ್ಲಿ 72 ರನ್ ನೆರವಿನಿಂದ 156 ರನ್‍ಗಳ ಗುರಿಯನ್ನು 5 ಎಸೆತ ಬಾಕಿ ಇರುವಂತೆಯೇ ಗುರಿ ಮುಟ್ಟಿತು. 19.1 ಓವರ್ ನಲ್ಲಿ ಕೊಹ್ಲಿ ಪಡೆ 2 ವಿಕೆಟ್ ನಷ್ಟಕ್ಕೆ ಕೊಹ್ಲಿ ಪಡೆ 158 ರನ್ ಸಿಡಿಸಿ ಗೆಲುವು ತನ್ನದಾಗಿಸಿಕೊಂಡಿತು.

