ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ( ಅಕ್ಟೋಬರ್ 3 ರಂದು) 208 ಪುರುಷರು ಹಾಗೂ 75 ಮಹಿಳೆಯರು ಸೇರಿದಂತೆ 283 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಬುಲೆಟಿನ್ ವರದಿ ತಿಳಿಸಿದೆ.
ವರದಿಯನ್ವಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 67 ಪುರುಷರು ಮತ್ತು 21 ಮಹಿಳೆಯರು, ನೆಲಮಂಗಲ ತಾಲ್ಲೂಕಿನಲ್ಲಿ 51 ಪುರುಷರು ಮತ್ತು 22 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 51 ಪುರುಷರು ಮತ್ತು 17 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 38 ಪುರುಷರು ಮತ್ತು 15 ಮಹಿಳೆಯರು ಹಾಗೂ ಬೆಂಗಳೂರು ನಗರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಗೆ ಸೇರಿದ 1 ಪುರುಷನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
*ಒಂದು ಸಾವು*
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 65 ವರ್ಷದ ಪುರುಷರೊಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ವರದಿ ತಿಳಿಸಿದೆ.

