ದೊಡ್ಡಬಳ್ಳಾಪುರ: ವಿದ್ಯುತ್ ವಲಯದ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ನೌಕರರ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಲಿದ್ದಾರೆ.
ಈ ಹಿನ್ನಲೆ ಅ.5ರ ಸೋಮವಾರ ಬೆಳಿಗ್ಗೆ 9.30ಕ್ಕೆ ಕಪ್ಪುಪಟ್ಟಿ ಧರಿಸಿ, ಸಾಂಕೇತಿಕ ಪ್ರತಿಭಟನೆಯನ್ನು ದೊಡ್ಡಬಳ್ಳಾಪುರ ನಗರ ಉಪ ವಿಭಾಗದ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಪ್ರತಿಭಟನೆ ಉಪವಿಭಾಗದ ಕಾರ್ಯ ಮತ್ತು ಪಾಲನಾ ಘಟಕದ ಅಧಿಕಾರಿಗಳು, ನೌಕರರು, ಮಾಪಕ ಓದುಗರು ಹಾಗೂ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಭಾಗವಹಿಸಬೇಕೆಂದು ಕರೆ ನೀಡಲಾಗಿದೆ.

