ದೊಡ್ಡಬಳ್ಳಾಪುರ: ವಿದ್ಯುತ್ ವಲಯದ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ನೌಕರರ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಬೆ.ವಿ.ಕಂಪನಿ ಉಪ ವಿಭಾಗದ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಎನ್.ರೋಹಿತ್ ಮಾತನಾಡಿ, ವಿದ್ಯುತ್ ಇಲಾಖೆ ಸುಧಾರಣೆ ನೆಪದಲ್ಲಿ ಪ್ರಸರಣ ಹಾಗೂ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದು ಬೇಡ, ವಿದ್ಯುತ್ ವಿತರಣೆ ಹಾಗೂ ಪ್ರಸರಣ ಕಂಪನಿಗಳ ಖಾಸಗೀಕರಣ ಕೈಬಿಡಬೇಕು.
ದೇಶದ ವಿದ್ಯುತ್ ಸರಬರಾಜು ಕಂಪನಿಗಳ ನಿರ್ವಹಣೆ ಕುರಿತಾದ ಸಮೀಕ್ಷೆಯಲ್ಲಿ ಬೆಸ್ಕಾಂ ಏಳನೆ ಸ್ಥಾನ ಪಡೆದಿದ್ದು, ರಾಜ್ಯದ ಉಳಿದ ಕಂಪನಿಗಳು ಮೊದಲ 20ರ ಸ್ಥಾನದಲ್ಲಿವೆ. ಇನ್ನಷ್ಟು ಸುಧಾರಣೆಗೆ ಅವಕಾಶ ಇದ್ದರೂ, ನಾನಾ ಕಾರಣವೊಡ್ಡಿ ಖಾಸಗಿಯವರಿಗೆ ಹಸ್ತಾಂತರಿಸುವ ಹಿಂದೆ ಷಡ್ಯಂತ್ರ ಅಡಗಿದೆ. ಪುಣೆ, ಸೂರತ್, ಒಡಿಶಾದಲ್ಲಿ ಕೆಲಸ ಮಾಡಲಾಗದೆ ಖಾಸಗಿ ಕಂಪನಿಗಳು ಕಾಲ್ಕಿತ್ತಿರುವಾಗ ರಾಜ್ಯದಲ್ಲೂ ಖಾಸಗಿ ಭೂತವನ್ನು ಗ್ರಾಹಕರ ಮೇಲೆ ಹೇರುವುದು ಸರಿಯಲ್ಲ,’’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರ ಸಹಾಯಕ ಲೇಕ್ಕಾಧಿಕಾರಿ ಆರ್.ಪ್ರಧೀಪ್, ಗ್ರಾಮೀಣ ಸಹಾಯಕ ಲೇಕ್ಕಾಧಿಕಾರಿ ಡಿ.ಎಲ್.ಗಂಗಾಧರ್, ಪ್ರಾಧಮಿಕ ಸಮಿತಿ ಅಧ್ಯಕ್ಷ ರವಿಕುಮಾರ್, ಮುತ್ತುರಾಜ್, ಕಾರ್ಯದರ್ಶಿ ಕೆ.ಎಲ್.ರಘುನಂದನ್, ಚಿಕ್ಕಪ್ಪ ಮಹಲ್ದಾರ್, ನೇಕಾರ ಸಂಘಟದ ಅದ್ಯಕ್ಷ ಹೇಮಂತ್ ರಾಜ್, ಶಾಖಾಧಿಕಾರಿ ನಿಂಗೇಗೌಡ, ಹೆಚ್.ಎಲ್.ರಾಜಪ್ಪ, ಮನಿನಾಯಕ್, ರಘುನಾಥ ರಾವ್, ನಟೇಶ್ ಮತ್ತಿತರಿದ್ದರು.

