ದೊಡ್ಡಬಳ್ಳಾಪುರ: ಕಳೆದ ಅಕ್ಟೋಬರ್ 29 ರಿಂದ ನಿಲ್ಲಿಸಲಾಗಿದ್ದ ಕೋವಿಡ್ – 19 ಬುಲೆಟಿನ್ ಅನ್ನು ಶಾಸಕ ಟಿ.ವೆಂಕಟರಮಣಯ್ಯ ಅವರ ಸೂಚನೆಯ ಮೇರೆಗೆ ತಾಲೂಕು ಆಡಳಿತ ಮತ್ತೆ ಬಿಡುಗಡೆ ಮಾಡಿದೆ.
ಬಿಡುಗಡೆಯಾದ ಸೋಮವಾರದ ಬುಲೆಟಿನ್ ಮಾಹಿತಿಯಂತೆ. ಸೆ.29 ರಿಂದ ಅ.6ರ ವರೆಗೆ ತಾಲೂಕಿನಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 2978ಕ್ಕೆ ಏರಿದ್ದರೆ, 379 ಮಂದಿ ಗುಣಮುಖರಾಗಿ ಮರಳಿದ್ದಾರೆ. ಆದರೆ ಸೋಂಕಿಗೊಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ 8 ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಸೋಮವಾರದ ಸಂಜೆಯ ವರಗೆ. ದೊಡ್ಡಬಳ್ಳಾಪುರ ತಾಲ್ಲೂಕಿನ 34 ಪುರುಷರು ಹಾಗೂ 24 ಮಹಿಳೆಯರು ಸೇರಿ 58 ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ಮಾಹಿತಿ ಅನ್ವಯ, ತೂಬಗೆರೆ ಹಾಗೂ ಚಿಕ್ಕಪೇಟೆಯಲ್ಲಿ ತಲಾ 5, ಗುಂಡಮಗೆರೆ, ರೋಜಿಪುರದಲ್ಲಿ ತಲಾ 4, ಬಾಶೆಟ್ಟಿಹಳ್ಳಿ, ಕೆಸ್ತೂರು, ಕೊನಘಟ್ಟದಲ್ಲಿ ತಲಾ 2 ಹಾಗೂ ಆರೂಢಿ, ಬೀಡಿಗೆರೆ, ದರ್ಗಾಜೋಗಹಳ್ಳಿ, ದೊಡ್ಡಬಳ್ಳಾಪುರ ( ಏರಿಯಾ ನೀಡಿಲ್ಲ), ಗಂಡರಾಜಪುರ, ಗುಡ್ಡದಹಳ್ಳಿ, ಹಾದ್ರಿಪುರ, ಹೊನ್ನಾವರ, ಕನಕದಾಸನಗರ, ಕನಸವಾಡಿ, ಕರೇನಹಳ್ಳಿ, ಕೋಡಿಹಳ್ಳಿ, ಕುರವೀಗೆರೆ, ಮಾರುತಿನಗರ, ಮೆಣಸಿ, ಮುತ್ಸಂದ್ರ, ನರಸಯ್ಯನ ಅಗ್ರಹಾರ, ರಘುನಾಥಪುರ, ರಾಮದೇವನಹಳ್ಳಿ, ಸಂಜಯನಗರ, ಶ್ಯಾಕಲದೇವನಪುರ, ಶೆಟ್ಟರಬೀದಿ, ಶ್ರೀನಗರ, ತೇರಿನಬೀದಿ ಮತ್ತು ತೂಬಗೆರೆ ಪೇಟೆಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 2978 ಮಂದಿಗೆ ಸೋಂಕು ತಗುಲಿದ್ದು, 2047 ಮಂದಿ ಗುಣಮುಖರಾಗಿದ್ದರೆ 91 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 784 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

