ದೊಡ್ಡಬಳ್ಳಾಪುರ: ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿರುವ ಹೊಸಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬೇಬಿವಾಲೇಕರ್ ನೇತೃತ್ವದ ಪೊಲೀಸರ ತಂಡ, ಐದು ಮಂದಿಯನ್ನು ಬಂಧಿಸಿ. ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕಾಮೇನಹಳ್ಳಿ ಬಳಿ ನಡೆದಿದೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಮೇನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ 11ಮಂದಿ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆ. ಡಿವೈ ಎಸ್ಪಿ ಟಿ.ರಂಗಪ್ಪ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಅವರ ಸೂಚನೆಯ ಮೇರೆಗೆ ಸಬ್ ಇನ್ಸ್ಪೆಕ್ಟರ್ ಬೇಬಿವಾಲೇಕರ್ ತಂಡ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಪೊಲೀಸರ ದಾಳಿಯ ಸುಳಿವರಿತ ಜೂಜಾಟದಲ್ಲಿ ತೊಡಗಿದ್ದವರು, ಸ್ಥಳದಿಂದ ಓಟಕಿತಿದ್ದು ಪೊಲೀಸರು ಬೆನ್ನಟ್ಟಿ ಐದು ಮಂದಿಯನ್ನು ಹಿಡಿದಿದರೆ, ಉಳಿದವರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಬೇಬಿವಾಲೇಕರ್ ಆಯತಪ್ಪಿ ಬಿದ್ದ ಕಾರಣ ಅಲ್ಪ ಮಟ್ಟದ ಗಾಯಗಳು ಸಹ ಉಂಟಾಗಿದೆ ಎಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಕಾರ್ಯಾಚರಣೆಯಲ್ಲಿ 5 ಮಂದಿಯನ್ನು ಬಂಧಿಸಿರುವ ಪೊಲೀಸರು, 6 ಸಾವಿರ ನಗದು, 10 ದ್ವಿಚಕ್ರ ವಾಹನಗಳನ್ನು ಸೀಸ್ ಮಾಡಿದ್ದು, ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬೇಬಿವಾಲೇಕರ್, ಸಿಬ್ಬಂದಿಗಳಾದ ಬಸವನಗೌಡ, ಗಿರೀಶ್, ರವಿ, ವಿವೇಕ್, ಹರೀಶ್, ನಾಗರಾಜ್, ದುರ್ಗಾಪ್ರಸಾದ್ ಭಾಗವಹಿಸಿದ್ದರು ಎನ್ನಲಾಗಿದೆ.

