ದೊಡ್ಡಬಳ್ಳಾಪುರ: ತಾಲೂಕಿನ ಜನಸಂಖ್ಯೆಯ ಶೇ.1ರಷ್ಟು ಜನರಿಗೆ ಕರೊನಾ ಸೋಂಕು ದೃಢ ಪಟ್ಟು, 2047 ಮಂದಿ ಗುಣಮುಖರಾಗಿ, 91 ಜನ ಸಾವನಪ್ಪಿರುವ ಮಾಹಿತಿ ಮಂಗಳವಾರದ ಬುಲೆಟಿನ್ ವರದಿಯಂತೆ ತಿಳಿದುಬಂದಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಕೋವಿಡ್-19 ಬುಲೆಟಿನ್ ಮಾಹಿತಿಯಂತೆ ದೊಡ್ಡಬಳ್ಳಾಪುರ ತಾಲ್ಲೂಕಿನ 40 ಪುರುಷರು ಹಾಗೂ 25 ಮಹಿಳೆಯರು ಸೇರಿ 65 ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ಮಾಹಿತಿ ಅನ್ವಯ, ತೂಬಗೆರೆಯಲ್ಲಿ 6, ದೊಡ್ಡಬಳ್ಳಾಪುರ ( ವಿಳಾಸ ನೀಡಿಲ್ಲ) 4, ಬಾಶೆಟ್ಟಿಹಳ್ಳಿ, ಮುತ್ಸಂದ್ರ, ಪಾಲನಜೋಗಹಳ್ಳಿ, ಎಸ್.ಎಸ್.ಘಾಟಿ, ಶಾಂತಿನಗರ, ಸುಣಗಟ್ಟಹಳ್ಳಿ ತಲಾ 3, ಡಿಕ್ರಾಸ್, ಚೈತನ್ಯನಗರ, ರೋಜಿಪುರ, ಎಸ್.ನಾಗೇನಹಳ್ಳಿ, ಟಿಬಿ ವೃತ್ತ, ವಿದ್ಯಾ ನಗರದಲ್ಲಿ ತಲಾ 2, ಕೋರ್ಟ್ ರಸ್ತೆ, ದರ್ಗಾಜೋಗಹಳ್ಳಿ, ಎಲೆಪೇಟೆ, ಗೆಜ್ಜಿಗದಹಳ್ಳಿ, ಗುಡ್ಡದಹಳ್ಳಿ, ಜಿಂಕೆಬಚ್ಚಹಳ್ಳಿ, ಕಚೇರಿಪಾಳ್ಯ, ಕನಕದಾಸ ನಗರ, ಖಾಸ್ ಭಾಗ್, ಕಸುವನಹಳ್ಳಿ, ಕೊಂಗಾಡಿಯಪ್ಪ ಮುಖ್ಯ ರಸ್ತೆ, ಮೇಲಿನ ನಾಯಕನಹಳ್ಳಿ, ನಾರಾಯಣಪ್ಪ ಲೇಔಟ್, ರಘುನಾಥ ಪುರ, ರಂಗಪ್ಪ ಸರ್ಕಲ್, ಸಂಜಯ್ ನಗರ, ಶಿವಪುರ, ಸೋಮೇಶ್ವರ ಬಡಾವಣೆ, ತ್ಯಾಗರಾಜನಗರ, ತಿಪ್ಪೂರು, ವೀರಾಪುರ ಹಾಗೂ ಎಳ್ಳುಪುರದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 3043 ಮಂದಿಗೆ ಸೋಂಕು ತಗುಲಿದ್ದು, 2047 ಮಂದಿ ಗುಣಮುಖರಾಗಿದ್ದರೆ 91 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 849 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

